ಮೃತಪಟ್ಟ ಸ್ಥಿತಿಯಲ್ಲಿ ಚಿರತೆ ಶವ ಪತ್ತೆ

ಕುಂದಾಪುರ:ತಾಲೂಕಿನ ಆಲೂರು ಗ್ರಾಮದ ತಾರಿಬೇರು ಎಂಬಲ್ಲಿ ಸುಮಾರು ಒಂದುವರೆ ವರ್ಷ ಪ್ರಾಯದ ಗಂಡು ಚಿರತೆ ಮೃತಪಟ್ಟ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.
ಚಿರತೆ ಹೊಟ್ಟೆ ಮತ್ತು ಕುತ್ತಿಗೆ ಭಾಗದಲ್ಲಿ ಗಂಭೀರ ಸ್ವರೂಪದ ಗಾಯವಾಗಿದ್ದು.ಕೊಳೆತು ಹುಳ ಆಗಿದೆ.ಚಿರತೆಗಳ ನಡುವೆ ನಡೆದ ಕಾದಾಟದಲ್ಲಿ ಗಾಯವಾಗಿರಬಹುದೆಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.ಶವ ಪರೀಕ್ಷೆಗೆ ಒಳಪಡಿಸಿದ ಬಳಿಕ ಚಿರತೆ ಕಳೆಬರವನ್ನು ವಂಡ್ಸೆ ಡಿಪೆÇೀದಲ್ಲಿ ಸುಡಲಾಯಿತು.ಡಿಆರ್‍ಎಫ್‍ಒ ಸೆಲ್ವ ಮುರುಗನ್,ಫಾರೆಸ್ಟ್ ಆಫೀಸರ್ ಮಂಜುನಾಥ್ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.