ರೈಲಿನಡಿಗೆ ಸಿಲುಕಿ ಯುವಕ ಸಾವು

ಕುಂದಾಪುರ:ತಾಲೂಕಿನ ಹಕ್ಲಾಡಿ ಗ್ರಾಮದ ತೋಪ್ಲು ನಿವಾಸಿ ವಿಘ್ನೇಶ ಮೊಗವೀರ (30) ಎಂಬುವವರು ಬೈಂದೂರು ತಾಲೂಕಿನ ನಾವುಂದ ಅರೆಹೊಳೆ ಎಂಬಲ್ಲಿ ರೈಲಿನಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ರೈಲಿನಡಿಗೆ ಸಿಲುಕಿ ನಜ್ಜುಗುಜ್ಜಾಗಿರುವ ಮೃತ ಶರೀರದ ಅವಶೇಷಗಳು ಸುಮಾರು ಅರ್ಧ ಕಿಲೋ ಮೀಟರ್ ತನಕ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಬಬ್ಬಾ ಇಬ್ರಾಹಿಂ ಗಂಗೊಳ್ಳಿ,ಮೌಲಾನ ಶಕೀಲ್,ಸಮೀ ಉಲ್ಲಾ ಕಾಝೀ,ಮಗ್ದೂಮ್ ಅರೆಹೊಳೆ ಅವರು ಮೃತ ಶರೀರದ ಭಾಗಗಳನ್ನು ಸಂಗ್ರಹಿಸಲು ಸಹಕರಿಸಿದರು.ಇಬ್ರಾಹಿಂ ಗಂಗೊಳ್ಳಿ ಆಂಬ್ಯುಲೆನ್ಸ್ ಮೂಲಕ ಶವವನ್ನು ಶವಗಾರಕ್ಕೆ ಸಾಗಿಸಲು ಸಹಕರಿಸಿದರು.