ಕುಂದಾಪುರ ನಾಗ ಬೊಬ್ಬರ್ಯ ದೇವಸ್ಥಾನದಲ್ಲಿ ನಾಗಮಂಡಲೋತ್ಸವ ಸಂಪನ್ನ

ಕುಂದಾಪುರ:ದಿ.ಜಿ.ಕಮಲ ಮತ್ತು ಜಿ.ಸುಬ್ಬಣ್ಣ ಶೇರೆಗಾರರ ಮನೆಯವರಿಂದ ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶ್ರೀ ನಾಗ ಬೊಬ್ಬರ್ಯ ದೇವಸ್ಥಾನ ಕುಂದಾಪುರದ ಮೂಡುಕೇರಿಯಲ್ಲಿ ನಡೆಯಿತು.
ಚತುಃಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಮಹಾಅನ್ನಸಂತರ್ಪಣೆ,ನಾಗಮಂಡಲ ಸೇವೆ ಜರುಗಿತು.ಸಾವಿರಾರರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀದೇವರ ಪ್ರಸಾದವನ್ನು ಸ್ವೀಕಾರ ಮಾಡಿದರು.
ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳಾದ ವೇದಮೂರ್ತಿ ಬಿ.ಲೋಕೇಶ್ ಅಡಿಗ ಬಡಾಕೆರೆ ಅವರು ನಾಗದರ್ಶನ ಸೇವೆಯನ್ನು ನೆರವೇರಿಸಿದರು.ಅಸಂಖ್ಯಾ ಭಕ್ತರು ಮಂಡಲ ಸೇವೆಯನ್ನು ಕಣ್ತುಂಬಿಕೊಂಡರು.ಹೂ ಹಣ್ಣು ಹಂಪಲುಗಳಿಂದ ಮಂಡಲದ ಚಪ್ಪರವನ್ನು ಸಿಂಗಾರ ಮಾಡಲಾಗಿತ್ತು.ನಾರಾಯಣ ಹೊಳ್ಳರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಅಂಪಾರು ಸರ್ವೋತ್ತಮ ವೈದ್ಯರು ಮತ್ತು ಬಳಗದವರಿಂದ ಮಂಡಲ ಸೇವೆ ಜರುಗಿತು.ಜಿ.ಸುಬ್ಬಣ್ಣ ಶೇರೆಗಾರರು ನಿವೇದಿಸಿಕೊಂಡಿದ್ದ ಚತುಃಪವಿತ್ರ ನಾಗಮಂಡಲ ಸೇವೆ ಅದ್ಧೂರಿಯಾಗಿ ಸಂಪನ್ನಗೊಂಡಿತು.ಸೇವಾಕರ್ತರ ಕುಟುಂಬಸ್ಥರು,ಊರ ಪರಊರ ಭಕ್ತರು ಉಪಸ್ಥಿತರಿದ್ದರು.
ಚತುಃಪವಿತ್ರ ನಾಗಮಂಡಲ ಸೇವೆ ಅಂಗವಾಗಿ ಹೊರೆ ಕಾಣಿಕೆ ಸಮರ್ಪಣೆ,ಚಪ್ಪರ ಮೂಹೂರ್ತ ಕಾರ್ಯಕ್ರಮ ನಡೆಯಿತು.