ಮಹಿಳಾ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಆಯ್ಕೆ

ಕುಂದಾಪುರ:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರ ಸಂಘ ಮರವಂತೆ ಅದರ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿ ಆಯ್ಕೆ ಅವಿರೋಧವಾಗಿ ನಡೆದಿದೆ.ಸಂಘದ ಅಧ್ಯಕ್ಷರಾಗಿ ಕಮಲಾಕ್ಷಿ ಖಾರ್ವಿ ಹಾಗೂ ಉಪಾಧ್ಯಕ್ಷರಾಗಿ ವನಿತಾ ಖಾರ್ವಿ ಆಯ್ಕೆಯಾಗಿದ್ದಾರೆ.
ಆಶಾ ಪೂಜಾರಿ ನಾವುಂದ,ಪೂರ್ಣಿಮಾ ಮೊಗವೀರ ನಾವುಂದ,ಸವಿತಾ ಖಾರ್ವಿ ಮರವಂತೆ,ನಾಗರತ್ನ ಖಾರ್ವಿ ಮರವಂತೆ,ನೇತ್ರಾವತಿ ಪೂಜಾರಿ ನಾವುಂದ,ಶೈಲಜಾ ಖಾರ್ವಿ ಮರವಂತೆ,ವಿಜಯದಾಸ್ ಮರವಂತೆ,ಸುಜಾತ ಪೂಜಾರಿ ನಾವುಂದ,ನಬೀಸಾ ನಾವುಂದ ಆಯ್ಕೆಯಾಗಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಕೃಷಿ ಅಧಿಕಾರಿ ಗಾಯಿತ್ರಿ ದೇವಿ ಎಸ್ ಭಾಗವಹಿಸಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಉಪಸ್ಥಿತರಿದ್ದರು.