ಬಂಟ್ವಾಡಿ ಶಾಲೆ ಅಮೃತ ಮಹೋತ್ಸವ ಸಮಾರೋಪ ಸಮಾರಂಭ


ಕುಂದಾಪುರ:ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳನ್ನು ಉನ್ನತೀಕರಣಗೊಳಿಸುವುದರ ಜತೆಗೆ ಉಳಿಸಿ ಬೆಳೆಸುವಂತಹ ಕೆಲಸ ಆದಾಗ ಮಾತ್ರ ತಮ್ಮೂರಿನಲ್ಲೆ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಉದ್ಯಮಿ ಅಭಿನಂದನ್ ಶೆಟ್ಟಿ ಹೇಳಿದರು.
ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಶನಿವಾರ ನಡೆದ ಶಾಲೆಯ ಅಮೃತ ಮಹೋತ್ಸವ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಸನ್ಮಾನಗಳು ಅಭಿನಂದನೆಗಳು ನಮ್ಮಮೇಲಿರುವ ಜವಾಬ್ದಾರಿ ಕೆಲಸಗಳು ಜಾಗೃತಗೊಳ್ಳುವಂತೆ ಮಾಡುತ್ತವೆ.ಇನ್ನಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ನೀಡುವಂತಹದ್ದು ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ್ ಶ್ಯಾನುಭಾಗ್ ಮಾತನಾಡಿ,ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಕೆ ಮಾಡಿದರು.
ಅಂತರಾಷ್ಟ್ರೀಯ ಜಾದುಗಾರ ಓಂ ಗಣೇಶ ಉಪ್ಪÅಂದ,ಶಾಲೆ ಸಂಚಾಲಕ ಬಿ.ಅರುಣ್ ಕುಮಾರ್ ಶೆಟ್ಟಿ,ಮಾಜಿ ತಾ.ಪಂ ಸದಸ್ಯ ಪ್ರಭು ಕೆನಡಿ ಪಿರೇರಾ,ಉಪ ತಹಶೀಲ್ದಾರ್ ವಂಡ್ಸೆ ನಾಡ ಕಛೇರಿ ಶೈಲಜಾ ಎಸ್.ಹೆಗ್ಡೆ,ಜಯಪ್ರಕಾಶ್ ಶೆಟ್ಟಿ,ಚಂದ್ರಶೇಖರ ಶೆಟ್ಟಿ,ನಾರಾಯಣ ಶೆಟ್ಟಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ಮೊಗವೀರ ಉಪಸ್ಥಿತರಿದ್ದರು.ಅಮೃತ ಮಹೋತ್ಸವ ಕಾರ್ಯಕ್ರಮದ ಸವಿನೆನಪಿಗಾಗಿ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಶಾಲೆಯ ಎಪ್ಪತ್ತೈದು ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.ಶಾಲೆಯ ಸಂಚಾಲಕರನ್ನು ಹಾಗೂ 1950-51 ರ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಅರುಣ್ ಹಕ್ಲಾಡಿ ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ಶೆಟ್ಟಿ ಮತ್ತು ಆದರ್ಶ ಕಟ್ಟಿನಮಕ್ಕಿ ನಿರೂಪಿಸಿದರು.ಹಾಸ್ಯಮೃತ ನಗೆ ಹಬ್ಬ ಕಾರ್ಯಕ್ರಮ ಜರುಗಿತು.










































































































































































































































































































































































































































































































































































































































































































































































































































































































































































































































































































































































































































































































































































































































































