ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆ ಶತಮಾನೋತ್ಸವ ಸಂಭ್ರಮ

ಕುಂದಾಪುರ:ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಯಳಜಿತ್ ಶಾಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಶನಿವಾರ ನಡೆಯಿತು.ನೂತನ ರಂಗ ಮಂದಿರ ಉದ್ಘಾಟನೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.ಬೆಳಗೆ ಧ್ವಜರೋಹಣವನ್ನು ಗೋಳಿಹೊಳೆ ಪಂಚಾಯಿತಿ ಅಧ್ಯಕ್ಷ ವಸಂತ ಹೆಗ್ಡೆ ನೆರವೇರಿಸಿದರು.ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.ದಾನಿಗಳನ್ನು ಗೌರವಿಸಲಾಯಿತು.
ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು.ನೃತ್ಯ ವೈವಿಧ್ಯ,ಶಿವಭೂತಿ ನಾಟಕ ಹಾಗೂ ಆಟಗಾರ ನಗೆ ನಾಟಕ ನಡೆಯಿತು.ಸಾವಿರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭ ಹಾಗೂ ಸಮಾರೋಪ ಸಮಾರಂಭ ಕಾರ್ಯ ಜರುಗಿತು.
ನಾಡೋಜ ಎಸ್ ಷಡಕ್ಷರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಊರಿನ ಹಬ್ಬದಂತೆ ಆಚರಿಸಲಾಗುತ್ತಿರುವುದು ಜನರು ಶಾಲೆ ಮೇಲಿನ ಅಭಿಮಾನವೆ ಕಾರಣವಾಗಿದೆ.ಸಂಘಟಿತರಾದಾಗ ಮಾತ್ರ ಕೆಲಸಗಳನ್ನು ಕಾರ್ಯ ಸಾಧನೆ ಮೂಲಕ ಮಾಡಬಹುದಾಗಿದೆ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರಂಗಮಂದಿರ ಉದ್ಘಾಟಿಸಿ ಮಾತನಾಡಿ.ಬಲಿಷ್ಠ ಹಳೆ ವಿದ್ಯಾರ್ಥಿಗಳ ತಂಡದಿಂದ ಶಾಲೆಯನ್ನು ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು.ಗ್ರಾಮೀಣ ಪ್ರದೇಶದಲ್ಲಿ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಸಿಗುತ್ತಿರುವುದು ಖುಷಿ ಸಂಗತಿ ಆಗಿದೆ ಎಂದರು.ಸರಕಾರಿ ಶಾಲೆಗಳು ಉಳಿಯ ಬೇಕು ಬೆಳೆಯ ಬೇಕು ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ಬೈಂದೂರು ಕ್ಷೇತ್ರದಲ್ಲಿ ಸರಕಾರಿ ಶಾಲೆಗಳನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ವಿಶಿಷ್ಠವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು.ದಾನಿಗಳ ಸಹಕಾರದಿಂದ ಶಾಲೆಗಳನ್ನು ಅಭಿವೃದ್ಧಿಗೊಳಿಸುವ ಕೆಲಸಕ್ಕೆ ವೇಗ ನೀಡಲಾಗುತ್ತಿದೆ.ಹಳೆ ವಿದ್ಯಾರ್ಥಿಗಳು ಊರಿನ ಉದ್ಯಮಿಗಳು ತಾವು ಕಲಿತ ಶಾಲೆಯನ್ನು ಅಭಿವೃದ್ಧಿಗೊಳಿಸಲು ಮುಂದೆ ಬರಬೇಕೆಂದು ಹೇಳಿದರು.
ದೀಪಕ್ ಕುಮಾರ್ ಶೆಟ್ಟಿ,ಚಂದನ್ ಬಿಲ್ಲವ,ಎಸ್‍ಡಿಎಂಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ,ಬಿ.ಒ ನಾಗೇಶ್ ನಾಯ್ಕ್,ಅರಣ್ಯ ಅಧಿಕಾರಿ ಸಂದೇಶ,ಅಧ್ಯಕ್ಷರು ಸರಕಾರಿ ನೌಕರರ ಸಂಘ ಶೇಖರ ಪೂಜಾರಿ,ಮಂಜಯ್ಯ ಪೂಜಾರಿ,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜೇಂದ್ರ ಶೆಟ್ಟಿ ಉಪಸ್ತಿತರಿದ್ದರು.
ಸುವರ್ಣ ಸಮಿತಿ ಅಧ್ಯಕ್ಷ ಮಂಗೇಶ್ ಶ್ಯಾನುಭೊಗ್ ಸ್ವಾಗತಿಸಿದರು.ಉಪನ್ಯಾಸಕ ಉದಯ್ ನಾಯ್ಕ್ ನಿರೂಪಿಸಿದರು.