ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಂಟ್ವಾಡಿ ಶಾಲೆ ಅಮೃತ ಮಹೋತ್ಸವ ಸಂಭ್ರಮ-2025

Share

ಕುಂದಾಪುರ:ಬೈಂದೂರು ವಲಯದ ನ್ಯೂ ಅನುದಾನಿತ ಹಿರಿಯ ಪ್ರಾಥಮಿಕ ಬಂಟ್ವಾಡಿ ಶಾಲೆಯಲ್ಲಿ ಅಮೃತ ಮಹೋತ್ಸವ-2025 ಕಾರ್ಯಕ್ರಮ ಅದ್ಧೂರಿಯಾಗಿ ಶುಕ್ರವಾರ ನಡೆಯಿತು.
ಗುಡ್ಡಮ್ಮಾಡಿ ದೇವಸ್ಥಾನದಿಂದ ಬಂಟ್ವಾಡಿ ಶಾಲೆ ವರೆಗೆ ಭವ್ಯ ಮೆರವಣಿಗೆ ನಡೆಯಿತು.ಚಂಡೆವಾದನ ವಾದ್ಯ ಘೋಷ ಮೆರವಣಿಗೆ ಸೊಬಗನ್ನು ಹೆಚ್ಚಿಸಿತು.ಅಮೃತ ಮಹೋತ್ಸವ ಸ್ವಾಗತ ಗೋಪುರದ ಉದ್ಘಾಟನೆ ಮತ್ತು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.ಬೆಳಗೆ ಅಮೃತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ನಾರಾಯಣ ಶೆಟ್ಟಿ ನೆರವೇರಿಸಿದರು.ಶಾಲೆಯ ಸಂಚಾಲಕ ಬಿ.ಅರುಣ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಅತಿಥಿಗಳು ಭಾಗವಹಿಸಿದ್ದರು.ಅಂಗನವಾಡಿ ವಿದ್ಯಾರ್ಥಿಗಳಿಂದ ಮತ್ತು ಶಾಲಾ ಮಕ್ಕಳಿಂದ ನೃತ್ಯ ಸಿಂಚನ ಕಾರ್ಯಕ್ರಮ ಜರುಗಿತು.ಗುರುವಂದನಾ ಕಾರ್ಯಕ್ರಮ,ಗೌರವ ಸಮರ್ಪಣೆ ಕಾರ್ಯಕ್ರಮ ಜರುಗಿತು.
ಶಾಲೆಯ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳ ಉಳಿವಿಗೆ ಸರ್ಕಾರ ಮಾತ್ರವಲ್ಲದೆ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದರು.
ಶಾಲೆಯ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ಯಾನ್ ಭಾಗ್ ಮಾತನಾಡಿ,ನಮ್ಮ ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಬಹಳಷ್ಟು ಜನರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಸಿಆರ್ ಪಿ ಸತೀಶ್, ಉದ್ಯಮಿ ಅಜಿತ್ ಪ್ರಸಾದ್ ಶೆಟ್ಟಿ, ಚಿತ್ತರಂಜನ್ ಹೆಗ್ಡೆ ಹರ್ಕೂರು,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನರಸಿಂಹ ಮೊಗವೀರ, ವಿದ್ಯಾರ್ಥಿ ಪೋಷಕರ ಸಂಘ ಅಧ್ಯಕ್ಷೆ ಜಯಲಕ್ಷ್ಮಿ ಉಪಸ್ಥಿತರಿದ್ದರು.ಶಾಲೆಯ ಮುಖ್ಯ ಶಿಕ್ಷಕ ಶ್ರೀಧರ ವಾರ್ಷಿಕ ವರದಿ ವಾಚಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿ ಆದರ್ಶ ದೇವಾಡಿಗ ಸ್ವಸ್ತಿ ವಾಚನ ನೆರವೇರಿಸಿದರು.ಚಂದ್ರಶೇಖರ್ ಶೆಟ್ಟಿ ಸ್ವಾಗತಿಸಿದರು.ನಾಗೇಶ್ ಶ್ಯಾನ್ ಬಾಗ್ ನಿರೂಪಿಸಿದರು.ಶಂಭು ಗುಡ್ಡಮ್ಮಾಡಿ ನಿರೂಪಿಸಿದರು.
ಕೆ.ಎಸ್‌.ಸರಕಾರಿ ಪ್ರೌಢಶಾಲೆ ಹಕ್ಲಾಡಿ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ ವೈಭವ,ಶಾಲಾ ವಿದ್ಯಾರ್ಥಿಗಳಿಂದ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

Share

Leave a comment

Your email address will not be published. Required fields are marked *

You cannot copy content of this page