ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ


ಕುಂದಾಪುರ: ಟ್ಯಾಬ್ಲೋ ಕುಣಿತ ಭಜನೆ ಪೇಟ ಸಹಿತ ಬಣ್ಣದ ಕೋಡೆ ಡೊಳ್ಳು ಕುಣಿತ ಚಂಡೆವಾದನ ಪೂರ್ಣಕುಂಭ ಸ್ವಾಗತದೊಂದಿಗೆ ಕುಂದಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೇವಿಯ ಪುರಪ್ರವೇಶ ಮೆರವಣಿಗೆ ಅದ್ಧೂರಿಯಾಗಿ ಸೋಮವಾರ ನಡೆಯಿತು.ಸಾವಿರಾರು ಭಕ್ತರ ಸಮ್ಮುಖದಲ್ಲಿ ಅಮ್ಮನವರು ಪುರಪ್ರವೇಶವನ್ನು ಮಾಡಿದರು.
ಶ್ರೀ ಭದ್ರಮಹಾಕಾಳಿ ದೇವಿಯ ರಕ್ತ ಚಂದನ ನೂತನ ದಾರು ಬಿಂಬಿದ ಶೋಭಾಯಾತ್ರೆಯೂ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರ ಕುಂಭಾಶಿಯಿಂದ ಹೆಮ್ಮಾಡಿ ತನಕ ವಾಹನ ಜಾತಾದ ಮೂಲಕ,ಹೆಮ್ಮಾಡಿ ಯಿಂದ ಶ್ರೀ ದೇವಿಯ ಸನ್ನಿಧಾನದ ತನಕ ಕಾಲ್ನಡಿಗೆಯಲ್ಲಿ ಸಾಗಿತು,ಮಹಿಳೆಯರು ಮತ್ತು ಪುರುಷರು ಹಾಗೂ ಮಕ್ಕಳು ಸಮವಸ್ತ್ರ ಧರಿಸಿ ಮೆರವಣಿಯಲ್ಲಿ ಹೆಜ್ಞೆ ಹಾಕಿದರು.ಪೂಷ್ಪ ಮಳೆ ಗೈಯುತ್ತಾ ಜೆಯ ಘೋಷದೊಂದಿಗೆ ಕಟ್‍ಬೇಲ್ತೂರು ಪುರವಾಸಿನಿಯನ್ನು ಸ್ವಾಗತಿಸಿ ಕೊಂಡರು.
ಆಡಳಿತ ಸಮಿತಿ ಗೌರವಾಧ್ಯಕ್ಷ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಮೆರವಣಿಗೆ ಚಾಲನೆಯನ್ನು ನೀಡಿದರು.ದೈವಸ್ಥಾನದ ಮೊಕ್ತೇಸರರಾದ ಹೆಗ್ಡೆಯವರ ಮನೆ ಬಿ.ವಿಠಲ ಶೆಟ್ಟಿ,ಆಡಳಿತ ಸಮಿತಿ ಅಧ್ಯಕ್ಷ ನಿವೃತ್ತ ಶಿಕ್ಷಕ ಆನಂದ ಶೆಟ್ಟಿ,ಸುಬ್ಬಣ್ಣ ಶೆಟ್ಟಿ,ಬಿ.ಭಾಸ್ಕರ ಶೆಟ್ಟಿ,ಆಡಳಿತ ಸಮಿತಿ ಉಪಾಧ್ಯಕ್ಷ ಬಿ.ಸೀತಾರಾಮ ಶೆಟ್ಟಿ,ಪಾತ್ರಿಗಳಾದ ರವಿ ನಾಯ್ಕ ಮತ್ತು ಗೋವಿಂದ ಪೂಜಾರಿ,ಅರ್ಚಕರಾದ ದೊಟ್ಟ ಪೂಜಾರಿ,ಶೇಖರ್ ಬಳೆಗಾರ್,ಚಂದ್ರನಾಯ್ಕ,ಶ್ರೀಧರ ಶೆಟ್ಟಿ,ಮಂಜು ಶೆಟ್ಟಿ,ಗ್ರಾಮಸ್ಥರು,ಭಕ್ತಾಧಿಗಳು ಉಪಸ್ಥಿತರಿದ್ದರು.ಪೆÇಲೀಸ್ ಇಲಾಖೆ ವತಿಯಿಂದ ಬೀಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.