ಲಂಚ ಸ್ವೀಕರಿಸುತ್ತಿದ್ದಾಗಲೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪಂಚಾಯಿತಿ ಅಧಿಕಾರಿಗಳು



ಗಂಗೊಳ್ಳಿ:ವ್ಯಕ್ತಿಯೊಬ್ಬರಿಂದ ಲಂಚವನ್ನು ಸ್ವೀಕರಿಸುತ್ತಿದ್ದ ಸಮಯದಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗೂ ಲೆಕ್ಕಪರಿಶೋಧಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಘಟನೆ ಬುಧವಾರ ನಡೆದಿದೆ.
ಆರೋಪಿತರಾದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಹೆಚ್ ಹಾಗೂ ಎಸ್‍ಡಿಎ ಸಿಬ್ಬಂದಿ ಶೇಖರ್.ಜಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ.ಪಂಚಾಯಿತಿ ಮೇಲೆ ನಡೆದ ಲೋಕಾಯುಕ್ತ ದಾಳಿಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಗಂಗೊಳ್ಳಿ ಗ್ರಾಮದ ನಿವಾಸಿ ಮೊಹಮ್ಮದ್ ಹನೀಫ್ ಅವರು ಸರ್ವೇ ನಂಬರ್ 108/13 ರಲ್ಲಿ 8.25 ಸೆಂಟ್ಸ್ ಜಾಗವನ್ನು 9/11 ಮಾಡುವ ಉದ್ದೇಶದಿಂದ ನವೆಂಬರ್ 2024ರಲ್ಲಿ ದಾಖಲೆಗಳೊಂದಿಗೆ ಗಂಗೊಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು.ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಮತ್ತು ಎಸ್‍ಡಿಎ ಸಿಬ್ಬಂದಿ ಶೇಖರ್.ಜಿ ಅವರು ಕೆಲಸ ಮಾಡಿ ಕೊಡದೆ ಅರ್ಜೀದಾರರನ್ನು ಸತಾಯಿಸಿ,25 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.ಅರ್ಜೀದಾರ ಹನೀಫ್ ಪಂಚಾಯಿತಿ ಅಧಿಕಾರಿಗಳಿಗೆ ಹಣವನ್ನು ನೀಡದೆ ಉಡುಪಿ ಲೋಕಾಯುಕ್ತ ಪೆÇಲೀಸ್ ಠಾಣೆಗೆ ಜ.22 ರಂದು ದೂರನ್ನು ನೀಡಿದ್ದಾರೆ.ಅರ್ಜೀದಾರರು ನೀಡಿದ ದೂರಿನ ಆಧಾರದ ಮೇಲೆ ಕರ್ನಾಟಕ ಲೋಕಾಯುಕ್ತ ಮಂಗಳೂರು ಪೆÇಲೀಸ್ ಅಧೀಕ್ಷಕ ನಟರಾಜ್ ಎಂಎ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಲೋಕಯುಕ್ತ ಪ್ರಭಾರ ಪೆÇಲೀಸ್ ಉಪಾಧೀಕ್ಷ ಉಡುಪಿ ಮಂಜುನಾಥ್,ಕರ್ನಾಟಕ ಲೋಕಯುಕ್ತ ಮಂಗಳೂರು ನಿರೀಕ್ಷಕ ಅಮಾನುಲ್ಲ ಎ ಮತ್ತು ಚಂದ್ರಶೇಖರ್ ಕೆ.ಎನ್ ಅವರ ನೇತೃತ್ವದಲ್ಲಿ ಮಧ್ಯಾಹ್ನ 1.10 ರ ಸುಮಾರಿಗೆ ಗಂಗೊಳ್ಳಿ ಪಂಚಾಯಿತಿ ಮೇಲೆ ದಾಳಿ ನಡೆಸಲಾಗಿದೆ.ಅರ್ಜೀದಾರ ಮೊಹಮ್ಮದ್ ಹನೀಫ್ ಅವರಿಂದ ಲಂಚದ ರೂಪದಲ್ಲಿ 22 ಸಾವಿರ.ರೂ ಅನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಮಾಶಂಕರ್.ಹೆಚ್ ಮತ್ತು ಎಸ್‍ಡಿಎ ಸಿಬ್ಬಂದಿ ಶೇಖರ್ ಜಿ ಹಣವನ್ನು ಸ್ವೀಕರಿಸುತ್ತಿದ್ದಾಗಲೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.ಉಡುಪಿ ಲೋಕಾಯುಕ್ತ ಠಾಣೆ ಸಿಬ್ಬಂದಿಗಳಾದ ನಾಗೇಶ್ ಉಡುಪ,ನಾಗರಾಜ್,ಮಲ್ಲಿಕಾ,ರೋಹಿತ್,ಪುಷ್ಪಾವತಿ,ಸತೀಶ್ ಹಂದಾಡಿ,ಅಬ್ದುಲ್ ಜಲಾಲ್,ರವೀಂದ್ರ,ರಮೇಶ್,ಪ್ರಸನ್ನ ದೇವಾಡಿಗ,ಸತೀಶ್ ಆಚಾರ್,ಸೂರಜ್,ರಾಘವೇಂದ್ರ ಹೊಸಕೋಟೆ,ಸುಧೀರ್ ಹಾಗೂ ಮಂಗಳೂರು ಲೋಕಾಯುಕ್ತ ಠಾಣಾ ಸಿಬ್ಬಂದಿಗಳಾದ ರಾಧಾಕೃಷ್ಣ,ಮಹೇಶ್,ವಿನಾಯಕ,ವೈಶಾಲಿ,ಶರತ್ ಸಿಂಗ್,ಗಂಗಣ್ಣ,ಪಂಪಣ್ಣ ಅವರು ಕಾರ್ಯಾಚರಣೆಯಲ್ಲಿ ಭಾಗವಹಿದ್ದರು.