ಶ್ರೀ ಈಶ್ವರಯ್ಯ ನಂದಿಕೇಶ್ವರ ಸಪರಿವಾರ ದೈವಸ್ಥಾನ ಕೊಳೂರು ವಾರ್ಷಿಕ ಹಾಲು ಹಬ್ಬ ಸೇವೆ,ಪ್ರತಿಷ್ಠಾ ಮಹೋತ್ಸವ



ಕುಂದಾಪುರ:ತಾಲೂಕಿನ ಕುಂದಬಾರಂದಾಡಿ ಗ್ರಾಮದ ಕೊಳೂರು ಶ್ರೀ ಈಶ್ವರಯ್ಯ ನಂದಿಕೇಶ್ವರ ಸಪರಿವಾರ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ,ಕಲಾಹೋಮ,ಗೆಂಡ ಸೇವೆ ಹಾಗೂ ಏಳನೇ ವರ್ಷದ ವಾರ್ಷಿಕ ಮಹೋತ್ಸವ ಕಾರ್ಯಕ್ರ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಬುಧವಾರ ನಡೆಯಿತು.
ವಾರ್ಷಿಕ ಉತ್ಸವದ ಅಂಗವಾಗಿ ಶ್ರೀ ದೇವರಿಗೆ ಶ್ರೀ ಈಶ್ವರಯ್ಯ ನಂದಿಕೇಶ್ವರ ಪರಿವಾರ ದೈವಗಳಿಗೆ ಹಣ್ಣುಕಾಯಿ,ಮಂಗಳಾರತಿ ಸೇವೆ,ಗೆಂಡ ಸೇವೆ ಹಾಗೂ ಅನ್ನದಾನ ಸೇವೆಯನ್ನು ಸಲ್ಲಿಸಲಾಯಿತು.ಭಕ್ತರು ಕ್ಷೇತ್ರಕ್ಕೆ ಆಗಮಿಸಿ ತಮ್ಮ ಹರಕೆಯನ್ನು ಸಲ್ಲಿಸಿದರು.ಕೊಳೂರು ದೈವದಮನೆ ಫ್ರೆಂಡ್ಸ್ ಸಹಯೋಗದೊಂದಿಗೆ ನಾಟಕ ಪ್ರದರ್ಶನ ಜರುಗಿತು.
ಅಶೋಕ ಶೆಟ್ಟಿ ಹೊಸೂರು ಮಾತನಾಡಿ,ಹಲವಾರು ವರ್ಷಗಳಿಂದ ಅರ್ಜೀಣಾವಸ್ಥೆಯಲ್ಲಿದ್ದ ದೇವಾಲಯವನ್ನು ಏಳು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ.ಕಟ್ಟುಕಟ್ಟಲೆ ಅಂತೆ ನಡೆದುಕೊಂಡು ಬಂದಿರುವ ಗೆಂಡ ಸೇವೆಯನ್ನು ಪುನರ್ ಆರಂಭಿಸಲಾಗಿದೆ.ಬಹಳಷ್ಟು ಇತಿಹಾಸವನ್ನು ಹೊಂದಿರುವ ಶ್ರೀ ಈಶ್ವರಯ್ಯ ನಂದಿಕೇಶ್ವರ ಪರಿವಾರ ದೈವಗಳ ಕಾರಣಿಕ ಶಕ್ತಿ ಅಪಾರವಾದ್ದು.ಯುವಕನ ಮೇಲೆ ದೈವವೂ ಆಕರ್ಷಣೆ ಆಗಿರುವ ಕುರುಹು ದೊರೆತ್ತಿದ್ದು ಮುಂದಿನ ದಿನಗಳಲ್ಲಿ ದೈವದ ಪಾರ್ಥಿಗಳು ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಆಲೋಚನೆ ಇದ್ದು ಭಕ್ತಾಧಿಗಳು ಗ್ರಾಮಸ್ಥರು ಸಹಕಾರ ನೀಡಬೇಕೆಂದರು.
ನಾರಾಯಣ ಶೆಟ್ಟಿ ಹೊಸೂರು ಮಾತನಾಡಿ,ನೂರಾರರು ವರ್ಷಗಳ ಹಿಂದೆ ಪಾಳುಬಿದ್ದ ದೈವಸ್ಥಾನವನ್ನು ದೈವಜ್ಞರ ಮುಖೇನ ದೈವ ನೆಲೆಯನ್ನು ಪತ್ತೆ ಹಚ್ಚಿ ಕಳೆದ ಏಳು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ.ಕ್ಷೇತ್ರವನ್ನು ನಂಬಿದ ಕುಟುಂಬಗಳು ಮೂಲೆ ಮೂಲೆಯಲ್ಲಿ ಇದ್ದು.ಕ್ಷೇತ್ರಕ್ಕೆ ಭೇಟಿ ನೀಡಿ ದೈವದ ಆಶೀರ್ವಾದವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಚೆನ್ನಕೇಶವ ಉಪಾಧ್ಯಾಯ ಬಾರಂದಾಡಿ ಮಾತನಾಡಿ,ಹಾಲು ಹಬ್ಬವನ್ನು ವಿಶೇಷವಾದ ರೀತಿಯಲ್ಲಿ ಮಾಡಲಾಗಿದ್ದು.ಏಳನೇ ವರ್ಷದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಕಲಾಹೋಮವನ್ನು ನಡೆಸಲಾಗಿದೆ.ದೈವವೂ ನಂಬಿದ ಭಕ್ತರನ್ನು ಕಾಪಾಡಲಿ ಎಂದು ಹರಸಿದರು.
ದೇವಲ್ಕುಂದಮನೆ ಕುಟುಂಬಸ್ಥರು ಹೊಸೂರು,ಕರ್ಕಿಮಕ್ಕಿ ಕುಟುಂಬಸ್ಥರು ಕೆರಾಡಿ ಹಾಗೂ ಶ್ರೀಧರ ಭಟ್ ಮೂಡಾರಿ ಮತ್ತು ಅರ್ಚಕರು,ಹಕ್ಲಾಡಿ ಪಂಚಾಯಿತಿ ಸದಸ್ಯ ಮಂಜುನಾಥ ಮಡಿವಾಳ,ಗ್ರಾಮಸ್ಥರು ಉಪಸ್ಥಿತರಿದ್ದರು.ಶ್ರೀ ಈಶ್ವರಯ್ಯ ನಂದಿಕೇಶ್ವರ ಸಪರಿವಾರ ದೈವಗಳ ಕೋಲ ಸೇವೆ,ಸ್ವಾಮಿ,ದೈವಾರಾಧನೆ ಸೇವೆ ಗುರುವಾರ ಜರುಗಿತು.





















































































































































































































































































































































































































































































































































































































































































































































































































































































































































































































































































































































































































































































































































































































































































