ಪ್ರತಿಭಾ ಪುರಸ್ಕಾರ ವಿತರಣೆ,ಸನ್ಮಾನ ಕಾರ್ಯಕ್ರಮ



ಕುಂದಾಪುರ:ಗುಜ್ಜಾಡಿ ಗ್ರಾಮದ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ,ವಿದ್ಯಾರ್ಥಿವೇತನ ಮತ್ತು ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.
ನಾಡ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಿಕ್ಕಮ್ಮರಿ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿದ ನನಗೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯ ವೃತ್ತಿ ಮಾಡಲು ಅವಕಾಶ ಸಿಕ್ಕಿರುವುದು ಅದೃಷ್ಟವಾಗಿದೆ.ನಿಷ್ಠೆಯಿಂದ ಪ್ರಮಾನಿಕತೆಯಿಂದ ಕೆಲಸ ಮಾಡಿದರೆ ಮಾತ್ರ ಜನರ ಪ್ರೀತಿಗಳಿಸಲು ಸಾಧ್ಯವಿದೆ ಎಂದು ಹೇಳಿದರು.
ದೈವಸ್ಥಾನದ ಅಧ್ಯಕ್ಷರಾದ ಬಾಬು.ಜೆ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷ ಎಸ್.ಕೆ ಪೂಜಾರಿ,ಕಾರ್ಯದರ್ಶಿ ನರಸಿಂಹ ಪೂಜಾರಿ ಅರೆಶಿರೂರು,ಪಾತ್ರಿಗಳಾದ ನಾರಾಯಣ ಪೂಜಾರಿ,ನರಸಿಂಹ ಪೂಜಾರಿ,ಮಂಜು ಪೂಜಾರಿ,ದುಗಪ್ಪ ಪೂಜಾರಿ ತಾರಾಪತಿ,ಆರತಿ ಪೂಜಾರಿ ಉಪಸ್ಥಿತರಿದ್ದರು.ದಾನಿಗಳಾದ ಸುರೇಶ ಪೂಜಾರಿ,ಕೃಷ್ಣ ಪೂಜಾರಿ,ಸದಾಶಿವ,ರಮಿತಾ ಸಂತೋಷ ಪೂಜಾರಿ ಹಾಗೂ ಡಾ.ಚಿಕ್ಕಮ್ಮರಿ ಅವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಬಾಬು ಜೆ ಪೂಜಾರಿ ಸ್ವಾಗತಿಸಿದರು.ಮಾಹಬಲ ದೇವಾಡಿಗ ನಿರೂಪಿಸಿ,ವಂದಿಸಿದರು.