ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ

Share

ಕುಂದಾಪುರ:ಪುರಾಣ ಪ್ರಸಿದ್ಧ ಗುಜ್ಜಾಡಿ ಗ್ರಾಮದ ಶ್ರೀ ಜಟ್ಟಿಗೇಶ್ವರ ಮತ್ತು ಭದ್ರಮಹಾಂಕಾಳಿ ಸಪರಿವಾರ ಗರಡಿ ದೈವಸ್ಥಾನದಲ್ಲಿ ವಾರ್ಷಿಕ ಹಾಲು ಹಬ್ಬ ಸೇವೆ ಮತ್ತು ಗೆಂಡ ಸೇವೆ ಹಾಗೂ ಏಳನೇ ವರ್ಷದ ವಾರ್ಷಿಕ ಪ್ರತಿμÁ್ಠ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅದ್ದೂರಿಯಾಗಿ ಮಂಗಳವಾರ ನಡೆಯಿತು.
ವಾರ್ಷಿಕ ಹಾಲು ಹಬ್ಬ ಅಂಗವಾಗಿ ಶ್ರೀ ದೇವರಿಗೆ ಹಣ್ಣು ಕಾಯಿ ಮಹಾಪೂಜೆ ಅನ್ನಸಂತರ್ಪಣೆ ದರ್ಶನ ಸೇವೆ ಗೆಂಡಸೇವೆ, ತುಲಾಭಾರ ಸೇವೆ ಜರುಗಿತು.ಪರಿವಾರ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಯಕ್ಷಗಾನ ಬಯಲಾಟ,ದಾನಿಗಳಿಗೆ ಸನ್ಮಾನ,ವಿದ್ಯಾರ್ಥಿ ವೇತನ ಕಾರ್ಯಕ್ರಮ ನಡೆಯಿತು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಬಾಬು.ಜೆ ಪೂಜಾರಿ ಉಪ್ಪುಂದ ಅವರು ಧಾರ್ಮಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ,ಆರು ವರ್ಷಗಳ ಹಿಂದೆ ಅಜೀರ್ಣ ಅವಸ್ಥೆಯಲ್ಲಿದ್ದ ದೇವಸ್ಥಾನ ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತ ಬಂದಿದೆ.ಪ್ರತಿ ಸಂಕ್ರಾಂತಿ ದಿನದಂದು ಅನ್ನದಾನ ಸೇವೆ ಹಾಗೂ ವಾರ್ಷಿಕವಾಗಿ ನಡೆಯುವ ಹಾಲು ಹಬ್ಬ ಭಕ್ತರು ಮತ್ತು ದಾನಿಗಳ ಸಹಕಾರದಿಂದ ಅದ್ದೂರಿಯಾಗಿ ನಡೆಸುತ್ತಾ ಬರಲಾಗುತ್ತಿದ್ದು.
ವಿದ್ಯಾರ್ಥಿಗಳನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ವಿತರಣೆ ಹಾಗೂ ದಾನಿಗಳನ್ನು ಸನ್ಮಾನಿಸಲಾಗಿದೆ ಎಂದರು.ಮಾತನಾಡುವ ದೇವರು ಎಂದು ಜಟ್ಟಿಗೇಶ್ವರ ದೇವರನ್ನು ಕರೆಯುತ್ತಾರೆ.ಕಷ್ಟ ಕಾಲದಲ್ಲಿ ಹೇಳಿ ಕೊಂಡ ಹರಕೆಯನ್ನು ಪರಿಹಾರ ಆದ ಮೇಲೆ ದೇವರಿಗೆ ಸಲ್ಲಿಸುವುದು ಇಲ್ಲಿನ ವಿಶೇಷತೆ ಆಗಿದೆ ಎಂದರು.ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.
ಅನ್ನದಾನ ಸೇವಾಕರ್ತರಾದ ರಮಿತಾ ಸಂತೋಸ ಪೂಜಾರಿ ಮಾತನಾಡಿ,ಇಂಜಿನಿಯರ್ ವಿದ್ಯಾಭ್ಯಾಸ ಮುಗಿಸಿದ ದಿನಗಳಲ್ಲಿ ಹಲವು ಕಾರಣದಿಂದ ಕೆಲಸ ಆಗದೆ ಇದ್ದಾಗ ಅನ್ನದಾನ ಸೇವೆಯನ್ನು ನೀಡುತ್ತೇನೆ ಎಂದು ಹರಕೆಯನ್ನು ಹೊತ್ತುಕೊಳ್ಳಲಾಗಿದ್ದು.ದೇವರಿಗೆ ಹರಕೆ ಹೊತ್ತುಕೊಂಡ ಮೇಲೆ ಕೆಲಸ ಆಗಿದೆ.ಆವೊಂದು ನೆಲೆಯಲ್ಲಿ ಹರಕೆಯನ್ನು ಇಂದು ಸಲ್ಲಿಸುತ್ತೇನೆ ಎಂದರು.
ದಾನಿಗಳಾದ ಆರತಿ ಮಾತನಾಡಿ,ದೇವರ ಕಾರಣಿಕ ಶಕ್ತಿ ಅಪಾರವಾಗಿದ್ದು.ಕ್ಷೇತ್ರವನ್ನು ನಂಬಿದ ಮೇಲೆ ತನ್ನ ಜೀವನದಲ್ಲಿ ಹಲವಾರು ಬದಲಾವಣೆಗಳು ಆಗಿದೆ ಎಂದರು.
ದೇವಸ್ಥಾನದ ಅಧ್ಯಕ್ಷರಾದ ಬಾಬು ಜೆ ಪೂಜಾರಿ ಉಪ್ಪುಂದ,ಉಪಾಧ್ಯಕ್ಷರಾದ ಎಸ್.ಕೆ ಪೂಜಾರಿ,ಕಾರ್ಯದರ್ಶಿ ನರಸಿಂಹ ಪೂಜಾರಿ,ಪಾತ್ರಿಗಳಾದ ನಾರಾಯಣ ಪೂಜಾರಿ,ನರಸಿಂಹ ಪೂಜಾರಿ,ಮಂಜು ಪೂಜಾರಿ,ಅರ್ಚಕ ಚಿಕ್ಕಯ್ಯ ಪೂಜಾರಿ, ಪದಾಧಿಕಾರಿಗಳು,ಪಾತ್ರಿಗಳು,ಅರ್ಚಕರು,ಗ್ರಾಮಸ್ಥರು,ನಂಬಿದ ಕುಟುಂಬಸ್ಥರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page