ಆರಾಧ್ಯ ಆರ್‍ಗೆ ಪ್ರಥಮ ಸ್ಥಾನ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ದೆಯಲ್ಲಿ ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಆರ್ ಪ್ರಥಮ ಸ್ಥಾನ ಪಡೆದಿದ್ದಾರೆ.ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಶಿಕ್ಷಕಿ ಯಶೋದ ದಂಪತಿ ಪುತ್ರಿ.ಶಿಕ್ಷಕ ಪ್ರಸನ್ನ ಕೆ,ಮಹಾಲಕ್ಷ್ಮೀ ಮತ್ತು ಸುನೀತ ತರಬೇತಿ ನೀಡಿದ್ದರು.