ಕಾರು ಪಿಕಪ್ ಮುಖಾಮುಖಿ ಡಿಕ್ಕಿ:ಇಬ್ಬರಿಗೆ ಗಾಯ


ಕುಂದಾಪುರ:ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಾಗುತ್ತಿದ್ದ ತ್ತಿದ್ದ ಕಾರ್ ರಾಷ್ಟ್ರೀಯ ಹೆದ್ದಾರಿಯ ವಿಭಜಕವನ್ನು ಹಾರಿಸಿಕೊಂಡು ಹೋಗಿ ಕುಂದಾಪುರದಿಂದ ಉಡುಪಿ ಕಡೆಗೆ ಬರುತ್ತಿದ್ದ ಪಿಕಪ್ ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಾಲಕರಿಬ್ಬರು ಗಂಭೀರ ಗಾಯಗೊಂಡ ಘಟನೆ ಕುಂಭಾಸಿಯ ಗಾಯತ್ರಿ ಲಾಡ್ಜ್ ಬಳಿ ಭಾನುವಾರ ಸಂಭವಿಸಿದೆ.
ಚಾಲಕರಾದ ಗಿರೀಶ್ ಮುಳ್ಳುಗುಡ್ಡೆ ಕುಂದಾಪುರ (23) ಹಾಗೂ ರಘುವೀರ್ ಶೆಟ್ಟಿ ಕುಂದಾಪುರ (52) ಇವರಿಗೆ ಗಂಭೀರ ಗಾಯಗಳಾಗಿದ್ದು ಕೋಟೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ.
ಸ್ಥಳಕ್ಕೆ ಕುಂದಾಪುರ ಸಂಚಾರಿ ಠಾಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡಿದ್ದಾರೆ.