ನಾಡದೋಣಿ ಮೀನುಗಾರರಿಂದ ರಾಷ್ಟ್ರೀಯ ಹೆದ್ದಾರಿ ತಡೆ

Share

ಕುಂದಾಪುರ:ಬುಲ್ಟ್ರೋಲ್ ಮತ್ತು ಲೈಟ್ ಫಿಶಿಂಗ್ ಮೀನುಗಾರಿಕೆ ವಿರೋಧಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆಯನ್ನು ತ್ರಾಸಿಯಲ್ಲಿ ಶುಕ್ರವಾರ ಮಾಡಲಾಯಿತು.
ಮೀನುಗಾರ ಮುಖಂಡ ಮದನ್ ಕುಮಾರ್ ಉಪ್ಪುಂದ ಮಾತನಾಡಿ,12 ರಿಂದ 240 ನಾಟಿಕಲ್ ದೂರದ ತನಕ ಅವೈಜ್ಞಾನಿಕ ಮೀನುಗಾರಿಕೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿದೆ.ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದರು ರಾಜ್ಯದಲ್ಲಿ ಅವೈಜ್ಞಾನಿಕ ಮೀನುಗಾರಿಕೆ ಇನ್ನೂ ನಿಷೇಧಗೊಂಡಿಲ್ಲ.ಸಾಂಪ್ರದಾಯಿಕ ಮೀನುಗಾರರ ಜೀವನದ ದೃಷ್ಟಿಯಿಂದ ಅವೈಜ್ಞಾನಿಕ ಮೀನುಗಾರಿಕೆ ನಿಷೇಧಕ್ಕೆ ಸರಕಾರ ಕೂಡಲೇ ಕಠಿಣ ಕ್ರಮಕೈಗೊಳ್ಳ ಬೇಕು ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ಮೀನುಗಾರರ ಸಮಸ್ಯೆ ಕುರಿತು ಕಳೆದ ಒಂದುವರೆ ವರ್ಷದಿಂದ ಸರಕಾರದ ಗಮನ ಸೆಳೆಯುತ್ತಾ ಬರಲಾಗುತ್ತಿದೆ.ಸಮಸ್ಯೆಯ ಗಂಭೀರತೆಯನ್ನು ತೋರ್ಪಡಿಸಲು ಪ್ರತಿಭಟನೆಗಳು ಅಗತ್ಯವಾಗಿದ್ದು.ಎಲ್ಲಾ ರೀತಿಯ ನೆರವನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಮುಖ್ಯ ಮಂತ್ರಿಗಳು ಹಾಗೂ ಸಚಿವರನ್ನು ಒಟ್ಟಾಗಿ ಭೇಟಿ ಮಾಡಿ ಮೀನುಗಾರರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದರು.
ಮೀನುಗಾರ ಮುಖಂಡ ಸೋಮನಾಥ ಮೊಗವೀರ ಮಾತನಾಡಿ,ಸಣ್ಣ ಸಣ್ಣ ಮೀನುಗಾರರ ಬದುಕನ್ನು ಸಂರಕ್ಷಣೆ ಮಾಡುವಲ್ಲಿ ಸರಕಾರ ಮುಂದಾಗಬೇಕು ಎಂದರು.
ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಒಕ್ಕೂಟ ಅಧಕ್ಷ ನಾಗೇಶ ಖಾರ್ವಿ,ಗೌರವ ಸಲಹೆಗಾರ ನವಿನ್ ಚಂದ್ರ ಉಪ್ಪುಂದಮೀನುಗಾರ ಮುಖಂಡರಾದ ವಸಂತ ಸುವರ್ಣ,ಯಾದವ್ ಮಲ್ಪೆ,ಬಾಳ ಮಲ್ಪೆ,ಕೃಷ್ಣ ಮಲ್ಪೆ,ಯಶವಂತ ಗಂಗೊಳ್ಳಿ,ನಾಗೇಶ ಖಾರ್ವಿ ಉಪ್ಪುಂದ,ಸುಧಾಕರ್,ತಿಮ್ಮಪ್ಪ ಖಾರ್ವಿ,ಹರಿಶ್ಚಂದ್ರ,ಮಂಜುನಾಥ,ಅಶ್ವಥ್ ಕಾಂಚನ್ ಮಂಗಳೂರು,ಕೃಷ್ಣ ಮುರುಡೇಶ್ವರ,ಹರೀಶ ಮೊಗವೀರ,ಬಲೀಂದ್ರ,ಅಜೀಜ್ ಗಂಗೊಳ್ಳಿ,ಸುರೇಶ ಮರವಂತೆ,ವೆಂಕರಮಣ ಖಾರ್ವಿ ಉಪ್ಪುಂದ,ಮಹೇಶ ನಾವುಂದ ಹಾಗೂ ಮೀನುಗಾರರು ಉಪಸ್ಥಿತರಿದ್ದರು.ಪೊಲುಸ್ ಇಲಾಖೆ ವತಿಯಿಂದ ಬಿಗಿ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು
.

Advertisement

Share

Leave a comment

Your email address will not be published. Required fields are marked *

You cannot copy content of this page