ಅವೈಜ್ಞಾನಿಕ ಬುಲ್ಟ್ರೋಲ್,ಲೈಟ್ ಫಿಶಿಂಗ್ ನಿಷೇಧದ ಅನುಷ್ಠಾನ ಮಾಡುವಂತೆ ಆಗ್ರಹ,ಮೀನುಗಾರರಿಂದ ಹೆದ್ದಾರಿ ತಡೆ

Share

Advertisement
Advertisement
Advertisement

ಕುಂದಾಪುರ:ಬುಲ್ಟ್ರೋಲ್ ಹಾಗೂ ಲೈಟ್ ಫಿಶಿಂಗ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಳೆದ ಹತ್ತು ವರ್ಷಗಳಿಂದ ಸರಕಾರದ ಮುಂದೆ ಬೇಡಿಕೆಗಳನ್ನು ಇಡುತ್ತಾ ಬರಲಾಗುತ್ತಿದ್ದರೂ.ಬಂಡವಾಳ ಶಾಹಿಗಳ ಲಾಬಿಗೆ ಜನಪ್ರತಿನಿಧಿಗಳು,ಅಧಿಕಾರಿಗಳು ಒಳಗಾಗಿದ್ದರಿಂದ ನಮ್ಮ ಜತೆ ಚೆಲ್ಲಾಟ ಆಡುತ್ತಿದ್ದಾರೆ.ಕೋರ್ಟ್‍ನ ಆದೇಶದ ವಿರುದ್ಧವಾಗಿ ಅವೈಜ್ಞಾನಿಕ ಮೀನುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು.ಇಲ್ಲಿ ತನಕ ನಮಗೆ ನ್ಯಾಯ ಸಿಕ್ಕಿಲ್ಲ.ಕಡಲಿನಲ್ಲಿ ಮತ್ಸ್ಯಸಂಪತ್ತು ನಾಶವಾಗುವ ಹಂತಕ್ಕೆ ಬಂದು ತಲುಪಿದ್ದು.ಅವೈಜ್ಞಾನಿಕ ಮೀನುಗಾರಿಕೆ ನಿಷೇಧಕ್ಕೆ ಮುಂದಿನ ಹತ್ತು ದಿನಗಳ ಒಳಗೆ ಪರಿಣಾಮಕಾರಿಯಾದ ನಿಲುವನ್ನು ಕೈಗೊಳ್ಳದೆ ಹೋದರೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದೆಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಅಧ್ಯಕ್ಷ ನಾಗೇಶ್ ಖಾರ್ವಿ ಎಚ್ಚರಿಕೆ ನೀಡಿದರು.
ಅವೈಜ್ಞಾನಿಕ ಮೀನುಗಾರಿಕೆಯಾದ ಬೆಳಕು ಮತ್ತು ಬುಲ್ಟ್ರೋಲ್ ಮೀನುಗಾರಿಕೆ ನಿಷೇಧದ ಅನುಷ್ಠಾನವನ್ನು ಶೀಘೃವಾಗಿ ಜಾರಿಗೆ ತರುವಂತೆ ಹಾಗೂ ಸೀಮೆಎಣ್ಣೆ ದರ ಕಡಿಮೆ ಮಾಡುವುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ತ್ರಾಸಿ ಕಡಲ ತೀರದಲ್ಲಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಮತ್ಸ್ಯ ಸಂಪತ್ತು ನಾಶವಾಗುತ್ತಿದ್ದರ ಪರಿಣಾಮ ಮೇ ತಿಂಗಳಿನಲ್ಲಿ ನಿಲುಗಡೆ ಆಗುತ್ತಿದ್ದ ಮೀನುಗಾರಿಕೆ ಉದ್ಯೋಗ ನವೆಂಬರ್ ತಿಂಗಳಿನಲ್ಲೆ ನಿಲ್ಲಿಸುವ ಹಂತಕ್ಕೆ ಬಂದು ತಲುಪಿದೆ.ಇದೆ ರೀತಿ ಮುಂದುವರೆದರೆ ಬಡ ಮೀನುಗಾರರ ಜೀವನ ಬೀದಿಗೆ ಬರಲಿದ್ದು ಸರಕಾರಗಳೆ ನೆರ ಹೋಣೆ ಆಗಲಿದೆ ಎಂದು ದೂರಿದರು.ಕರಾವಳಿ ಜಿಲ್ಲೆಯ 19 ಕ್ಷೇತ್ರದಲ್ಲಿನ 11 ಕ್ಷೇತ್ರಗಳಲ್ಲಿ ಮೀನುಗಾರರೆ ಪ್ರಾಭಲ್ಯವನ್ನು ಹೊಂದಿದ್ದು.ಮುಂದಿನ ದಿನಗಳಲ್ಲಿ ರಾಜಕೀಯ ಸನ್ನಿವೇಶದ ಮೂಲಕ ಉತ್ತರ ನೀಡಲಾಗುವುದು ಎಂದು ಹೇಳಿದರು.
ದ.ಕ ಜಿಲ್ಲಾ ಮೀನುಗಾರರ ಒಕ್ಕೂಟ ಅಧ್ಯಕ್ಷ ವಸಂತ ಸುವರ್ಣ ಮಾತನಾಡಿ,ಈಗಿನ ಬಂಡವಾಳ ಶಾಯಿಗಳು ಹಾಕಿರುವ ಬೆಳಕು ಮತ್ತು ಬುಲ್ಟ್ರೋಲ್ ಮೀನುಗಾರಿಕೆ ಯಿಂದ ಮೀನಿನ ಸಂಪತ್ತು ನಾಶವಾಗಲಿದೆ ಎಂದು ತಮ್ಮ ಆತಂಕವನ್ನು ಹೊರಹಾಕಿದರು.ಕೋರ್ಟ್‍ನ ಆದೇಶ ಪಾಲಿಸಿ ನಮಗೆ ನ್ಯಾಯವನ್ನು ದೊರಕಿಸಿ ಕೊಡಿ ಎಂದರು.
ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಗೌರವ ಸಲಹೆಗಾರ ನವಿನ್ ಚಂದ್ರ ಉಪ್ಪುಂದ ಮಾತನಾಡಿ,ಕೇರಳ ರಾಜ್ಯದಲ್ಲಿ ಅವೈಜ್ಞಾನಿಕ ಮೀನುಗಾರಿಕೆಗೆ ಅವಕಾಶವಿಲ್ಲ.ಗೋವಾ ರಾಜ್ಯ ಕೇಂದ್ರ ಸರಕಾರದ ಕಾನೂನನ್ನು ಪಾಲನೆ ಮಾಡುತ್ತಿದೆ.ಕಾನೂನನ್ನು ಉಲ್ಲಂಘಿಸುವ ಮೀನುಗಾರರ ವಿರುದ್ಧ ಕನಿಷ್ಠ 10 ಲಕ್ಷ.ರೂ ದಂಡವನ್ನು ವಿಧಿಸುವ ನಿಯಮ ಜಾರಿಯಲ್ಲಿದೆ.ಅಂತಹ ಗಂಡುಗಾರಿಕೆ ಎದೆಯನ್ನು ಕರ್ನಾಟ ಸರಕಾರ ತೋರಿಸಬೇಕಿದೆ.ನಿಷೇಧದ ಕಾನೂನುನನ್ನು ಅನುಷ್ಠಾನ ಮಾಡುವಲ್ಲಿ ಸರಕಾರ ಹಿಂದೇಟು ಹಾಕಿದರೆ ರಾಜ್ಯಪಾಲರನ್ನು ಭೇಟಿ ಆಗಿ.ಕೋರ್ಟ್ ಮೊರೆ ಹೊಗಲಾಗುವುದು ಎಂದು ಹೇಳಿದರು.
ಕೃಷಿ ತೋಟಗಾರಿಕೆ ವಳನಾಡು ಮೀನುಗಾರಿಕೆಗೆ ನೀಡುವ ಸವಲತ್ತುಗಳನ್ನು ನಾಡದೋಣಿ ಮೀನುಗಾರರಿಗೂ ನೀಡುವುದರ ಮೂಲಕ ತಲೆ ತಲಾಂತರದಿಂದ ನಡೆದು ಬಂದಂತಹ ಮೂಲ ಮೀನುಗಾರಿಕೆ ಉಳಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಬೈಂದೂರು ಕ್ಷೇತ್ರದ ಶಾಸಕ ಗಂಟಿಹೊಳೆ,ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಮಾಜಿ ಜಿ.ಪಂ ಅಧ್ಯಕ್ಷ ರಾಜು ಎಸ್ ಪೂಜಾರಿ,ಮದನ್ ಕುಮಾರ್,ಸೋಮನಾಥ ಖಾರ್ವಿ,ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ,ಡಿಡಿ ಅಂಜನಾದೇವಿ ಮತ್ತು ಉತ್ತರ ಕನ್ನಡ ಜಿಲ್ಲೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು,ಉಡುಪಿ,ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮುಖಂಡರುಗಳು,ಬೈಂದೂರು,ಕುಂದಾಪುರ ತಾಲೂಕು ಹಾಗೂ ಭಟ್ಕಳ ಭಾಗದ ಮೀನುಗಾರರು ಉಪಸ್ಥಿತರಿದ್ದರು.ಮಹಿಳಾ ಮೀನುಗಾರರು ಪ್ರತಿಭಟನೆಯಲ್ಲಿ ಭಾಗವಹಿಸುವುದರ ಮೂಲಕ ಬೆಂಬಲ ಸೂಚಿಸಿದರು.ಡಿವೈಎಸ್‍ಪಿ ಬೆಳ್ಳಿಯಪ್ಪಿ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು.ಬೈಂದೂರು ಸರ್ಕಲ್ ಸವಿತ್ರ ತೇಜ,ಗಂಗೊಳ್ಳಿ ಠಾಣೆ ಹರೀಶ್ ಮತ್ತು ಬಸವರಾಜ ಕನಶೆಟ್ಟಿ,ಬೈಂದೂರು,ಶಂಕರನಾರಾಯಣ,ಕೊಲ್ಲೂರು,ಕುಂದಾಪುರ ಠಾಣೆ ಪಿಎಸ್‍ಐಗಳು ಹಾಗೂ ಪೆÇಲೀಸ್ ಮತ್ತು ಆರೋಗ್ಯ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು ಹಾಜರಿದ್ದರು.ನೂರಾರು ನಾಡದೋಣಿಗಳನ್ನು ತ್ರಾಸಿ ಕಡಲ ತೀರದಲ್ಲಿ ಲಂಗರು ಹಾಕಿ ಪ್ರತಿಭಟನೆ ಮಾಡಲಾಯಿತು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page