ಹೇರಂಜಾಲು ಗುಡೆ ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ವಿತರಣೆ







ಕುಂದಾಪುರ:ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ವಿಶೇಷವಾದ ರೀತಿಯಲ್ಲಿ ಸೇವೆಯನ್ನು ಮಾಡುತ್ತಿರುವ ಉದ್ಯಮಿ ಕೆ.ಎಸ್ ಪ್ರಮೋದ್ ರಾವ್ ಖಂಬದಕೋಣೆ ಅವರ ಮೊಮ್ಮಗ ಪ್ರಥಮ್ ರಾವ್ ಅವರ ಆರನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೈಂದೂರು ತಾಲೂಕಿನ ಖಂಬದಕೋಣೆ ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಹಾಗೂ ಹೇರಂಜಾಲು ಗುಡೆ ದೇವಸ್ಥಾನ ಅಂಗನವಾಡಿ ಕೇಂದ್ರ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಮತ್ತು ಪಠ್ಯೇತರ ಚಟುವಟಿಕೆಗಳಿಗೆ
ಅನುಕೂಲಕರವಾಗಿರುವ ಕಿಟ್ ಮಂಗಳವಾರ ವಿತರಿಸಲಾಯಿತು.
ಪ್ರಥಮ್ ರಾವ್ ಹುಟ್ಟು ಹಬ್ಬದ ಅಂಗವಾಗಿ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್ ಅವರು ಮಾತನಾಡಿ,ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಶಾಲಾ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ಉದ್ದೇಶದಿಂದ ಕೆ.ಎಸ್ ಪ್ರಮೋದ್ ರಾವ್ ಅವರು ತಮ್ಮ ಮೊಮ್ಮಗನ ಹುಟ್ಟು ಹಬ್ಬದ ಅಂಗವಾಗಿ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಾಗೂ ಪಠ್ಯ ಪುಸ್ತಕ ವಿತರಣೆ ಮಾಡಿರುವುದು ಬಹಳಷ್ಟು ಶ್ಲಾಘನೀಯ ಕೆಲಸವಾಗಿದೆ ಎಂದರು.ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಊರಿನ ಉದ್ಯಮಿಗಳು ಮುಂದೆ ಬರಬೇಕೆಂದು ಕೇಳಿಕೊಂಡರು.
ನಿವೃತ್ತ ಮುಖ್ಯೋಪಾಧ್ಯಾಯರಾದ ನಾಗರಾಜ ಮೆರ್ಟ್ ಮಾತನಾಡಿ,ದಾನಗಳಲ್ಲೆ ಶ್ರೇಷ್ಠವಾದದ್ದು ವಿದ್ಯಾದಾನ ವಾಗಿದೆ.ದಾನಿಗಳು ನೀಡಿದ ಪಠ್ಯ ಪುಸ್ತಕಗಳು ಉತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ಬಳಕೆ ಮಾಡಿ ಕೊಳ್ಳಬೇಕೆಂದರು.
ಉದ್ಯಮಿ ನಾಗರಾಜ ಶೆಟ್ಟಿ ನಾರ್ಕಳಿ ಗುಡಿಮನೆ ಮಾತನಾಡಿ,ಕೆ.ಎಸ್ ಪ್ರಮೋದಣ್ಣ ಅವರ ಅಭಿಮಾನಿಗಳ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಬಳಕೆ ಆಗುವಂತಹ ಪುಸ್ತಕ ಮತ್ತು ಅದಕ್ಕೆ ಪೂರಕ ವಾಗಿರುವಂತಹ ಪೆನ್ನು ಇನ್ನಿತರ ವಸ್ತುಗಳನ್ನು ನೀಡಲಾಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ಅವರಿಂದ ನಡೆಯುವಂತೆ ಆಗಲಿ ಎಂದು ಶುಭಾಶಯ ಹಾರೈಸಿದರು.
ಉದ್ಯಮಿ ಬಾಲಕೃಷ್ಣ ಪ್ರಭು,ರಚನಾ ಶಿವಪ್ರಸಾದ್ ಪ್ರಭು,ಎಸ್ ಡಿಂಎಸಿ ಅಧ್ಯಕ್ಷ ಶಿವರಾಜ್, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷ ಸುಶೀಲಾ ದೇವಾಡಿಗ,ಅಂಗನವಾಡಿ ಶಿಕ್ಷಕಿ ಗೌರಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.ಶಿಕ್ಷಕಿ ಭಾರತಿ ಸ್ವಾಗತಿಸಿ ನಿರೂಪಿಸಿದರು.
ಸುಮಿತ್ರಾ ಆಚಾರಿ ಸಹಕರಿಸಿದರು.
ಕೆ.ಎಸ್ ಪ್ರಮೋದ್ ರಾವ್ ಖಂಬದಕೋಣೆ ಅವರು ಫೌಂಡರ್ ಎಂಜಿಎಂ ಅರ್ಥ ಮೂವರ್ಸ್ ನೊಯಿಡಾ, ಡೈರೆಕ್ಟರ್ ವಿಧಿ ಇನ್ಫ್ರಾ ಸೊಲ್ಯೂಷನ್ ಪ್ರ್ರೈವೆಟ್ ಲಿಮಿಟೆಡ್ ಹಾಗೂ ಆರ್.ಕೆ ಸಂಜೀವ ರಾವ್ ಸ್ಮಾರಕ ದತ್ತಿ, ಕಂಬದಕೋಣೆ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾಗಿ ಹಾಗೂ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ಸಂಸ್ಥಾಪಕರಲ್ಲಿ ಒಬ್ಬರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.