ಯಕ್ಷಗಾನ ಕಲಾವಿದರಿಗೆ ಗೌರವದ ಸನ್ಮಾನ


ಕುಂದಾಪುರ:ಧಾರ್ಮಿಕ ಮುಖಂಡ ಸಮಾಜ ಸೇವಕರಾದ ದುಬೈ ಉದ್ಯಮಿ ಸೇನಾಪುರ ಹಾಡಿಮನೆ ಮಂಜುನಾಥ ವಿನಯ ಪೂಜಾರಿ ದಂಪತಿಗಳ ವತಿಯಿಂದ ಸೇನಾಪುರ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ಬಯಲಾಟ ಹಾಗೂ ಮೇಳದ ಹಿರಿಯ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ನಡೆಯಿತು.
ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಆಧುನಿಕ ಜೀವನ ಶೈಲಿ ಪದ್ಧತಿ ನಡುವೆಯೂ ಯಕ್ಷಗಾನದ ನೆಲೆ ಗಟ್ಟು ಸುಭದ್ರವಾಗಿ ಉಳಿಯಲು ಜನರು ಯಕ್ಷಗಾನದ ಮೇಲಿಟ್ಟಿರುವ ದೈವಿಕ ಭಾವನೆಗಳೆ ಕಾರಣವಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಮೇಳದ ಹಿರಿಯ ಕಲಾವಿದರಾದ ವಸಂತ ಹೆಗ್ಡೆ ಅವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ,ಕಲಾವಿದರನ್ನು ಗೌರವಿಸುವುದು ಎಂದರೆ ಕಲಾ ಮಾತೆಯನ್ನು ಗೌರವಿಸಿದಂತೆ ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಮುಖಂಡ ಶರತ್ ಕುಮಾರ್ ಶೆಟ್ಟಿ ಬೆಳ್ಳಾಡಿ,ವೆಂಕಟೇಶ ಮಂಜ,ಪಂಚಾಯಿತಿ ಸದಸ್ಯ ಸಂದೀಪ್ ಪೂಜಾರಿ,ಮೇಳದ ಮ್ಯಾನೇಜರ್ ಪುಷ್ಪರಾಜ್ ಶೆಟ್ಟಿ,sಮಂಜುನಾಥ ಪೂಜಾರಿ ಸೇನಾಪುರ ಉಪಸ್ಥಿತರಿದ್ದರು.ಮೇಳದ ವ್ಯವಸ್ಥಾಪಕ ಗಿರೀಶ ಹೆಗ್ಡೆ ಧರ್ಮಸ್ಥಳ ಹಾಗೂ ಕಲಾವಿದರಾದ ವಸಂತ ಗೌಡ ಕಾಯರ್ತಡ್ಕ,ಮಹೇಶ ಮಣಿಯಾಣಿ,ಚಿದಂಬರ ಬಾಬು,ಶಂಭಯ್ಯ ಕಂಜರ್ಪಣೆ,ಚಂದ್ರಶೇಖರ ಧರ್ಮಸ್ಥಳ,ಬಾಲಕೃಷ್ಣ ನಾಯ್ಕ ಬೆಳಂದಿ ಅವರನ್ನು ಸನ್ಮಾನಿಸಲಾಯಿತು.ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುಮಿತ್ ಮರವಂತೆ ಅವರ ಚಿಕಿತ್ಸೆಗೆ 5 ಸಾವಿರ.ರೂ ಧನಸಹಾಯ ನೀಡಲಾಯಿತು.ವಿದ್ವಾನ್ ದಾಮೋದರ ಶರ್ಮಾ ನಿರೂಪಿಸಿದರು.ಶ್ರೀ ಧರ್ಮಸ್ಥಳ ಕ್ಷೇತ್ರಮಹಾತ್ಮೆ ಯಕ್ಷಗಾನ ಬಯಲಾಟ ಮತ್ತು ಅನ್ನದಾನ ಸೇವೆ ನಡೆಯಿತು.ನಾಡಗುಡ್ಡೆಯಂಗಡಿ ಪ್ರಸನ್ನ ಗಣಪತಿ ದೇವಸ್ಥಾನದಿಂದ ಸೇನಾಪುರ ಮಹಾವಿಷ್ಣು ದೇವಸ್ಥಾನದ ವರೆಗೆ ಮೇಳದ ಗಣಪತಿ ಮೂರ್ತಿಯನ್ನು ಭವ್ಯ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು.