ಯೋಧ ಅನೂಪ್ ಪೂಜಾರಿ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮನ



ಕುಂದಾಪುರ:ಭಾರತಾಂಬೆಯ ಹೆಮ್ಮೆಯ ಪುತ್ರ ವೀರ ಯೋಧರಾದ ಅನೂಪ್ ಪೂಜಾರಿ ಅವರು ವಿಧ್ಯಾರ್ಥಿ ಜೀವನದಲ್ಲೆ ದೇಶ ಸೇವೆಯ ಕನಸು ಕಂಡು ಅದನ್ನ ಕಳೆದ 13 ವರ್ಷಗಳ ಹಿಂದೆ ನನಸು ಮಾಡಿಕೊಂಡು ಮರಾಠ ರೆಜಿಮೆಂಟಿನ ಸೈನಿಕರಾಗಿ ತಾಯಿ ಭಾರತ ಮಾತೆಯ ಸೇವೆಗೆ ತನ್ನನ್ನು ಅರ್ಪಿಸಿಕೊಂಡು ನಿನ್ನೆ ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ವಾಹನ ಕಂದಕಕ್ಕೆ ಉರುಳಿ ಹುತಾತ್ಮರಾಗಿದ್ದರು.
ಯೋಧ ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ಆಗಮಿಸಿದೆ.ಸಾವಿರಾರು ಸಂಖ್ಯೆಯಲ್ಲಿ ನಾಗರಿಕರು ಹಾಜರಿದ್ದರು.