ಸಮುದ್ರದಲ್ಲಿ ನಾಪತ್ತೆಯಾಗಿರುವ ರೋಹಿದಾಸ್ ಶವವಾಗಿ ಪತ್ತೆ

ಕುಂದಾಪುರ:ತ್ರಾಸಿ ಬೀಚ್‍ನಲ್ಲಿ ಜೆಸ್ಕಿ ರೈಡ್ ಮೂಲಕ ರೈಡ್ ಮಾಡುತ್ತಿದ್ದ ಸಂದರ್ಭದಲ್ಲಿ ಜೆಸ್ಕಿ ರೈಡ್ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಮಗುಚಿ ಬಿದ್ದ ಪರಿಣಾಮ ಜೆಸ್ಕಿ ರೈಡ್ ಡ್ರೈವರ್ ರೋಹಿದಾಸ್ (41) ಅವರು ನೀರಿನಲ್ಲಿ ಮುಳುಗಿ ಸಮದ್ರದಲ್ಲಿ ಶನಿವಾರ ನಾಪತ್ತೆಯಾಗಿದ್ದರು.ಅವರ ಶವ ತ್ರಾಸಿ ಹೊಸಪೇಟೆ ಬಳಿ ಸಮುದ್ರ ತೀರದಲ್ಲಿ ಸೋಮವಾರ ಪತ್ತೆಯಾಗಿದೆ.
ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಎಂಬುವವರು ಡಿ.23 ರಂದು ಸೋಮವಾರ ಬೆಳಿಗ್ಗೆ 3 ಗಂಟೆ ಸುಮಾರಿಗೆ ಹೊಸಪೇಟೆ ಬಳಿ ಮೀನುಗಾರಿಕೆಗೆ ತೆರಳಲು ಹೋಗುತ್ತಿದ್ದಾಗ ಸಮುದ್ರ ತೀರದಲ್ಲಿ ಶವ ತೇಲುತ್ತಿರುವುದು ಕಂಡು ಬಂದಿದೆ.ಮೀನುಗಾರರು ತಕ್ಷಣ ಕರಾವಳಿ ಕಾವಲು ಪಡೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.ಕೆಎನ್‍ಡಿ ಸಿಬ್ಬಂದಿ ನಿಶಾಂತ್ ಖಾರ್ವಿ ಮತ್ತು ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ ಹಾಗೂ ಮೃತರ ಸಹೋದ್ಯೋಗಿಗಳು ಶವವನ್ನು ಸಮುದ್ರ ತೀರದಿಂದ ಮೇಲಕ್ಕೆ ತಂದು ಗಂಗೊಳ್ಳಿ ಪೆÇಲೀಸ್ ಠಾಣೆಗೆ ಮಾಹಿತಿಯನ್ನು ರವಾನಿಸಿದ್ದರು.ಗಂಗೊಳ್ಳಿ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಶವವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.