ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಸಂಭ್ರಮ

Share

Advertisement
Advertisement

ಕುಂದಾಪುರ:ಒಂದು ಊರಿನಲ್ಲಿರುವ ಶಾಲೆ ಯಾವುದೆ ರೀತಿಯ ಕೊರತೆ ಇಲ್ಲದೆ ಮುನ್ನೆಡೆಯುತ್ತಿದೆ ಎಂದಾದರೆ ಅದು ಊರಿನ ಬೆಳವಣಿಗೆಯ ಸಂಕೇತವಾಗಿದೆ.ಆ ನಿಟ್ಟಿನಲ್ಲಿ ಬಡಾಕೆರೆ ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಶಾಲೆ ಉಳಿವಿಗೆ ಸ್ಪಂದನೆ ಮಾಡುತ್ತಿರುವುದು ಬಹಳ ಒಳ್ಳೆ ಕೆಲಸವಾಗಿದ್ದು.ಮಾದರಿ ಶಾಲೆಯನ್ನಾಗಿ ನಿರೂಪಿಸುವಲ್ಲಿ ಹಮ್ಮಿಕೊಂಡಿರುವ ಯೋಜನೆಗಳು ರಾಜ್ಯಕ್ಕೆ ಮಾದರಿಯಾಗಿದ್ದು ಸದಾ ನಿಮ್ಮ ಜತೆ ನಿಲ್ಲುತ್ತೇನೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಬೈಂದೂರು ವಲಯದ ಸರಕಾರಿ ಹಿರಿಯ ಪ್ರಾಥಮಿಕ ಬಡಾಕೆರೆ (ಉತ್ತರ) ಶಾಲೆಯಲ್ಲಿ ಶನಿವಾರ ನಡೆದ ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ 2024 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡುವುದರಿಂದ ಮಾತ್ರ ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ.ದುಡಿಮೆಯ ಫಲವನ್ನು ಒಳ್ಳೆ ಉದ್ದೇಶಕ್ಕೆ ವಿನಿಯೋಗ ಮಾಡುವುದರಿಂದ ನಾವು ಭೂಮಿ ಮೇಲೆ ಇಲ್ಲದ ಮೇಲೆಯೂ ಶಾಶ್ವತವಾಗಿ ನಮ್ಮ ಹೆಸರು ಉಳಿದುಕೊಳ್ಳಲಿದೆ ಎಂದರು.
ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ಪ್ರಾಂತೀಯ ಧರ್ಮಾಧಿಕಾರಿಗಳು ಶಾರದಾ ಪೀಠಂ ಶೃಂಗೇರಿ ವೇದ ಮೂರ್ತಿ ಲೋಕೇಶ ಅಡಿಗ ನಾಗ ಪಾತ್ರಿಗಳು ಬಡಾಕೆರೆ ಮಾತನಾಡಿ,ಬದಲಾದ ಕಾಲಮಾನದಲ್ಲಿ ಸ್ನೇಹ ಸಂಘಟನೆ ಅತಿ ಅನಿವಾರ್ಯವಾಗಿದೆ.ಸಂಘಟನೆಗಳ ಉದ್ದೇಶ ಸಮಾಜದ ಸುಖ ಶಾಂತಿ ಸಹಭಾಗಿತ್ವವನ್ನು ಕಾಪಾಡುವಂತದ್ದಾಗಿರಬೇಕು.ಒಂದು ವ್ಯವಸ್ಥೆಯನ್ನು ಬಲಪಡಿಸಲು ಸಂಘಟನಾತ್ಮಕವಾಗಿ ಕೆಲಸ ಮಾಡುವುದರಿಂದ ಮಾತ್ರ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ,ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಒಂದು ಶೈಕ್ಷಣಿಕ ಸಂಸ್ಥೆಯನ್ನಾಗಿ ಬೆಳೆಸುವ ಉದ್ದೇಶ ಇಟ್ಟುಕೊಂಡಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ನಾವುಂದ ಅಧ್ಯಕ್ಷ ಎಸ್.ರಾಜು ಪೂಜಾರಿ,ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ,ಸಮೃದ್ಧ ಜನ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್ ಸುರೇಶ ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು.ಉದ್ಯಮಿ ಬದ್ರುದ್ದಿನ್,ತಿಮ್ಮಪ್ಪ ಖಾರ್ವಿ ಭಟ್ಕಳ,ಬೈಂದೂರು ಬಿ.ಒ ನಾಗೇಶ ನಾಯ್ಕ್,ಅಶೋಕ ಶೆಟ್ಟಿ ಸಂಸಾಡಿ,ಎಸ್‍ಡಿಎಂಸಿ ಅಧ್ಯಕ್ಷ ಶ್ರೀಧರ ದೇವಾಡಿಗ,ಕಿರಿಮಂಜೇಶ್ವರ ಶಾಲೆ ಮುಖ್ಯೋಪಾಧ್ಯಾಯ ಶೇಖರ ಪೂಜಾರಿ,ಸ್ನೇಹ ಸಮ್ಮಿಲನ ಶಾಲಾ ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು.ವೇದ ಮೂರ್ತಿ ಲೋಕೇಶ್ ಅಡಿಗ ಸ್ವಾಗತಿಸಿದರು.ಶಾಲಾ ಮುಖ್ಯ ಶಿಕ್ಷಕಿ ರೋಹಿಣಿ ವಾರ್ಷಿಕ ವರದಿ ಮಂಡಿಸಿದರು.ಶಿಕ್ಷಕ ಸುಬ್ರಹ್ಮಣ್ಯ ನಿರೂಪಿಸಿದರು.ಹಳೆ ವಿದ್ಯಾರ್ಥಿ ಕೃಷ್ಣ ಪೂಜಾರಿ ವಂದಿಸಿದರು.ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.ಶಾಲಾ ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.ವಾಚ್‍ಮ್ಯಾನ್ ಎಂಬ ನಾಟಕ ಪ್ರದರ್ಶನ ಜರುಗಿತು.

Advertisement

Advertisement
Advertisement


Share

Leave a comment

Your email address will not be published. Required fields are marked *

You cannot copy content of this page