ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳ ಮಹೋತ್ಸವ ಸಂಪನ್ನ









ಕುಂದಾಪುರ:ಮಂಡಾಡಿ ಹೋರ್ವರಮನೆಯ ಹದಿನೇಳನೆ ವರ್ಷದ ಕಂಬಳೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ಶುಕ್ರವಾರ ನಡೆಯಿತು.
ಮಂಡಾಡಿ ಹೋರ್ವರಮನೆ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ ಕುಂದಾಪುರ,ಬೈಂದೂರು,ಭಟ್ಕಳ,ಉಡುಪಿ,ಕಾರ್ಕಳ ಭಾಗದ ಸುಮಾರು ಐವತ್ತಕ್ಕೂ ಅಧಿಕ ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ಕನೆಹಲಗೆ ವಿಭಾಗ,ಹಗ್ಗ ಹಿರಿಯ ವಿಭಾಗ,ಹಗ್ಗ ಕಿರಿಯ ವಿಭಾಗ,ಸಬ್ ಜ್ಯೂನಿಯರ್ ವಿಭಾಗ,ಕೆಸರು ಗದ್ದೆ ಓಟ ನಡೆಯಿತು.ವಿಜೇತ ಕೋಣಗಳ ಮಾಲೀಕರಿಗೆ ಹಾಗೂ ಓಟ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪಧಾಳುಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಹೋರ್ವರ ಮನೆ ಕಂಬಳೋತ್ಸವದಲ್ಲಿ ಭಾಗವಹಿಸಿದ ಕೋಣಗಳ ತಂಡಕ್ಕೆ ಗೌರವಧನವನ್ನು ನೀಡಲಾಯಿತು.ಹಗಲು,ಇರುಳು ನಡೆದ ಕಂಬಳೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸಿದರು.
ಮಾಂಡವ ಋಷಿ ಮಹರ್ಷಿಗಳು ತಪಸನ್ನು ಆಚರಿಸಿದಂತಹ ಪುಣ್ಯದ ನೆಲ ವಾಗಿರುವ ಮಂಡಾಡಿ ಹೋರ್ವರಮನೆ ಮಕ್ಕಿಮನೆ ಕಂಬಳೋತ್ಸವಕ್ಕೆ ಸುಮಾರು ಎಂಟುನೂರು ವರ್ಷಗಳ ಕಾಲದ ಇತಿಹಾಸವನ್ನು ಹೊಂದಿದೆ.ಕಾರಣಾಂತರಗಳಿಂದ ಕಂಬಳೋತ್ಸವ ಆಚರಣೆ ನಿಂತುಹೋಗಿದ್ದು ಪ್ರಶ್ನಾ ಚಿಂತನಾ ಮುಖೇನ 2008 ರಿಂದ ದಿ.ರತ್ನಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬಹಳಷ್ಟು ವಿಜೃಂಭಣೆಯಿಂದ ಸಂಪ್ರದಾಯ ಬದ್ಧವಾಗಿ ಮಂಡಾಡಿ ಹೋರ್ವರಮನೆ ಕಂಬಳೋತ್ಸವ ನಡೆದುಕೊಂಡು ಬರುತ್ತಿದ್ದು.ಶುಕ್ರವಾರ ಹದಿನೇಳನೆ ವರ್ಷದ ಕಂಬಳೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿದೆ.ತಲಕಾವೇರಿ ಯಿಂದ ಆಗಮಿಸಿದ ಏಳು ಜನ ಶಕ್ತಿ ದೇವತೆಗಳು ಕಾಡ್ತಿ ಅಮ್ಮನ ಹಿರಿತನದಲ್ಲಿ ನೆಲೆನಿಂತ ಮಂಡಾಡಿ ಎನ್ನುವ ಪ್ರದೇಶವಾಗಿದ್ದು ಬಹಳಷ್ಟು ಇತಿಹಾಸವನ್ನು ಹೊಂದಿದೆ.
ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಮಂಜಯ್ಯ ಶೆಟ್ಟಿ ಅವರು ಕಂಬಳ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ,ಮಂಡಾಡಿ ಮನೆತನದ ದೈವ ದೇವತೆಗಳ ಆರಾಧನೆಯೊಂದಿಗೆ ಮಂಡಾಡಿ ಹೋರ್ವರ ಕಂಬಳೋತ್ಸವ ಕಾರ್ಯಕ್ರಮ ಕಳೆದ ಹದಿನೇಳು ವರ್ಷಗಳಿಂದ ಸಾಂಪ್ರದಾಯಿಕ ಬದ್ಧವಾಗಿ ನಡೆದುಕೊಂಡು ಬರುತ್ತಿದ್ದು.ವರ್ಷದಿಂದ ವರ್ಷಕ್ಕೆ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಶುಭಹಾರೈಸಿದರು.
ಹಿರಿಯರಾದ ಬಾರ್ಕೂರು ಶಾಂತರಾಮ ಶೆಟ್ಟಿ ಮಾತನಾಡಿ,ಕಾರಣಾಂತರಗಳಿಂದ ನಿಂತು ಹೋಗಿದ್ದ ಕಂಬಳೋತ್ಸವಕ್ಕೆ ಮಂಡಾಡಿ ರತ್ನಾಕರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದ್ದು ಜಿಲ್ಲೆಯಲ್ಲಿಯೆ ಅತ್ಯಂತ ದೊಡ್ಡ ಕಂಬಳವಾಗಿದೆ.ಹೊರ ಜಿಲ್ಲೆಗಳಿಂದಲೂ ಕಂಬಳದ ಕೋಣಗಳು ಭಾಗವಹಿಸುತ್ತಿರುವುದನ್ನು ನೋಡಿದರೆ ಕಂಬಳದ ಜಜ ಪ್ರೀಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದರು.
ಲಕ್ಷ್ಮಣ ಶೆಟ್ಟಿ ಮಾತನಾಡಿ,ಮಂಡಾಡಿ ಹೋರ್ವರಮನೆ ಕಂಬಳಕ್ಕೆ ಸುಮಾರು ಎಂಟುನೂರು ವರ್ಷಗಳ ಕಾಲದ ಇತಿಹಾಸ ಇದೆ ಎನ್ನುವ ಐತಿಹ್ಯ ಇದೆ.ಕಾರಣಾಂತರಗಳಿಂದ ನಿಂತುಹೋಗಿರುವ ಕಂಬಳ ದೇವರ ಕೃಪೆ ಅಂತೆ ಮಂಡಾಡಿ ಹೋರ್ವರಮೆನೆ ಮತ್ತು ಮಕ್ಕಿಮನೆ ಸಹೋಗದಲ್ಲಿ ನಡೆದುಕೊಂಡು ಬರುತ್ತಿದೆ ಎಂದರು.ದಿವಾಂಗತ ರತ್ನಕಾರ ಶೆಟ್ಟಿ ಅವರ ಕೊಡುಗೆಯನ್ನು ಸ್ಮರಿಸಿದರು.
ಮಹೇಶ್ ಹೆಗ್ಡೆ ಮಾತನಾಡಿ,ಕಂಬಳ ಮಹೋತ್ಸವ ಇನ್ನಷ್ಟು ವಿಜೃಂಭಣೆಯಿಂದ ನಡೆಯಲಿ ಎಂದು ಶುಭಹಾರೈಸಿದರು.
ಆದರ್ಶ ಶೆಟ್ಟಿ ಮಾತನಾಡಿ,ಕಂಬಳ ಎನ್ನುವುದು ಅವಿಭಜಿತ ದ.ಕ ಜಿಲ್ಲೆಯ ವಿಶಿಷ್ಟವಾದ ಜಾನಪದ ಕ್ರೀಡೆಯಾಗಿದೆ.ಕಂಬಳ ಎನ್ನುವುದು ನಮ್ಮ ನೆಲೆಯ ಪ್ರತಿಷ್ಠಿತ ಕ್ರೀಡೆಯಾಗಿದ್ದು ದೇಶ ವಿದೇಶಗಳಲ್ಲಿಯೂ ಜನಪ್ರೀಯತೆ ಗಳಿಸಿದೆ ಎಂದರು.
ಕಂಬಳ ಸಮಿತಿ ಗೌರವಾಧ್ಯಕ್ಷ ಡಾ.ರಂಜನ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಂಬಳ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ,ಮಂಡಾಡಿ ಹೋರ್ವರಮನೆ ಬಾಬಣ್ಣ ಶೆಟ್ಟಿ,ಸಂತೋಷ ಶೆಟ್ಟಿ,ಸಂದರ್ಶ ಶೆಟ್ಟಿ,ಸನತ್ ಶೆಟ್ಟಿ,ಹರ್ಷಿತ್ ಶೆಟ್ಟಿ ಹಾಗೂ ಮಂಡಾಡಿ ಹೋರ್ವರಮನೆಯವರು,ಗ್ರಾಮಸ್ಥರು ಉಪಸ್ಥಿತರಿದ್ದರು.ಶಿಕ್ಷಕ ಉದಯ್ ಕುಮಾರ್ ಶೆಟ್ಟಿ ನಿರೂಪಿಸಿದರು.ಕಿಶೋರ್ ಬೈಂದೂರು,ಅಭಿ ಪಾಂಡೇಶ್ವರ ಕಂಬಳದ ಉದ್ಘೋಷಕರಾಗಿ ಭಾಗವಹಿಸಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































