ಪಾದಾಚಾರಿಗೆ ಬೈಕ್ ಡಿಕ್ಕಿ:ಮೂವರಿಗೆ ಗಾಯ
ಕುಂದಾಪುರ:ಹೆಮ್ಮಾಡಿ ಯಿಂದ ತಲ್ಲೂರು ಕಡೆಗೆ ಸಾಗುತ್ತಿದ್ದ ಬೈಕ್ ಜಾಲಾಡಿಯಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಕೊಲ್ಲೂರು ದುರ್ಗಾ ಲಾಡ್ಜ್ ಓನರ್ ಮಂಜುನಾಥ ಭಟ್ ಗಂಭೀರ ಸ್ವರೂಪದ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೈಕ್ ಸವಾರರಾದ ರೋಹಿತ್ ಮತ್ತು ಅಪ್ಪಯ್ಯ ಸ್ವಾಮಿ ಮಾಲಾಧಾರಿ ದಕ್ಷ ಎನ್ನುವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದರು.ಆ್ಯಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಗಾಯಾಳುಗಳನ್ನು ಆಸ್ಪತ್ರೆ ಸಾಗಿಸಲು ಸಹಕರಿಸಿದರು.