ಗ್ಯಾಸ್ ತುಂಬಿದ ಪಿಕಪ್ ಗಾಡಿಗೆ ಬೈಕ್ ಡಿಕ್ಕಿ:ಬೈಕ್ ಸವಾರ ಸ್ಥಳದಲ್ಲೆ ಸಾವು
ಕುಂದಾಪುರ:ಗೋವಾ ದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಬೈಕ್ಗೆ ಕುಂದಾಪುರ ಕಡೆಯಿಂದ ಮುಳ್ಳಿಕಟ್ಟೆ ಕಡೆಗೆ ಸಾಗುತ್ತಿದ್ದ ಗ್ಯಾಸ್ ತುಂಬಿದ ಪಿಕಪ್ ಗಾಡಿ ಕುಂದಾಪುರ ತಾಲೂಕಿನ ಅರಾಟೆ ಸೇತುವೆ ಡಿವೈಡರ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಂಗಳೂರು ಮೂಲದ ನಿವಾಸಿ ರಂಜಿತ್ ಬಲ್ಲಾಳ್ (59) ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಆ್ಯಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರಾರ್ ಮೃತ ದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು.ಸೇತುವೆ ಸಮೀಪ ಡಿವೈಡರ್ ಬಳಿ ದ್ವಿಮುಖ ಸಂಚಾರದಲ್ಲಿ ಅಪಘಾತ ಸಂಭವಿಸಿದ್ದರಿಂದ ಸುಮಾರು ಒಂದು ಕಿ.ಮೀ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.