ಮಂಗಳೂರಿನಲ್ಲಿ ಭಾರಿ ಮಳೆ,ಕೃತಕ ನೆರೆ ಸೃಷ್ಟಿ,ವ್ಯಾಪಕ ಹಾನಿ
ಮಂಗಳೂರು:ಫೆಂಗಲ್ ಚಂಡಮಾರುತದ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಯಲ್ಲಿ ಸೋಮವಾರ ಭಾರಿ ಮಳೆಯಾಗಿದೆ.
ಹವಾಮಾನ ವೈಪರಿತ್ಯ ದಿಂದಾಗಿ ಏಕಾಏಕಿ ಸುರಿದ ವರುಣನ ಅಬ್ಬರಕ್ಕೆ ಜಿಲ್ಲೆಯ ಜನತೆ ತತ್ತರಿಸುವಂತಾಗಿದೆ. ಗುಡುಗು,ಸಿಡಿಲು ಸಹಿತ ಮಳೆ ಧಾರಾಕಾರವಾಗಿ ಸುರಿದಿದ್ದು, ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.
ಗಾಳಿಮಳೆಗೆ ಹಲವು ಮರಗಳು ಧರೆಗುರುಳಿವೆ.ಮಳೆಯ ಅಬ್ಬರ ಜೋರಿರುವುದರಿಂದ ಡಿ. 3 ರಂದು ಜಿಲ್ಲೆಯಲ್ಲಿ ಶಾಲಾ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮ ವಹಿಸುವಂತೆ ಜಿಲ್ಲಾಡಳಿತ
ಸೂಚಿಸಿದೆ.
ಟಿಪ್ಪು ಸುರತ್ಕಲ್ ಮಾರುಕಟ್ಟೆ ಬಳಿಯ ವೀನಸ್ ಅಸ್ಪತ್ರೆಗೆ ಪ್ರವೇಶಿಸಿದ ನೆರೆ ನೀರಿನಿಂದಾಗಿ,ರೋಗಿಗಳ ಪರದಾಟ ಮಾಡುವಂತ್ತಾಯಿತು.