ಸಾಂಪ್ರದಾಯಿಕ ಶೈಲಿಯಲ್ಲಿ ತಿರಿ ನಿರ್ಮಾಣ,ಖುಷಿಯಲ್ಲಿ ಸಂಭ್ರಮಿಸಿದ ಕುಟುಂಬಿಕರು

ಕುಂದಾಪುರ: ಕೃಷಿಕರಾದ ನಾವುಂದ ಕಾರಂತರ ಹಿತ್ತಲು ಸೂರ ಪೂಜಾರಿಯವರ ಮನೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಭತ್ತವನ್ನು ಶೇಕರಿಸಿಡುವ ಕುಂದಾಪುರದ ಆಡು ಭಾಷೆಯಲ್ಲಿ ಹೇಳುವಂತಹ ತಿರಿ ಯನ್ನು ತಯಾರಿಸಿದ್ದು ನೋಡುಗರ ಮನ ಸೆಳೆಯುವಂತೆ ಇದೆ.
ಹುಲ್ಲಿನಿಂದ ಮಾಡಿದ ಹಗ್ಗ ಅಂದರೆ ಮಡಿ ಬಳ್ಳಿ ಮತ್ತು ಒಂದಷ್ಟು ಭತ್ತದ ಒಣಗಿದ ಹುಲ್ಲು ಇತ್ಯಾದಿಗಳಿಂದ ಸಾಂಪ್ರದಾಯಕ ಶೈಲಿಯಲ್ಲಿ ತಿರಿವೊಂದನ್ನು ಅತ್ಯಂತ ಸುಂದರ ಮತ್ತು ಚಂದವಾಗಿ ರಚಿಸಲಾಗಿದೆ.ಈ ಹಿಂದೆ ಕರಾವಳಿ ಭಾಗದಲ್ಲಿ ಪ್ರತಿ ರೈತರ ಮನೆಯ ಅಂಗಳದಲ್ಲಿ ಇಂತಹ ತಿರಿಯನ್ನು ರಚಿಸಲಾಗುತ್ತಿತ್ತು.ಬದಲಾದ ಕಾಲ ಮಾನದಲ್ಲಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಕೃಷಿ ಚಟುವಟಿಕೆಯನ್ನು ಮತ್ತೆ ನೆನಪು ಮಾಡುವ ಪ್ರಯತ್ನ ಸೂರ ಪೂಜಾರಿ ಮಾಡಿದ್ದಾರೆ.