ಬ್ರಹ್ಮಾವರ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಹಿಳಾ ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ ಕಾರ್ಯಕ್ರಮ ಆಯೋಜನೆ

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಮಹಿಳಾ ಕುಂದು ಕೊರತೆ ಪರಿಹಾರ ಸಮಿತಿಯಿಂದ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿ ಡಾ. ದೀಕ್ಷಿತಾ ಸ್ತ್ರೀ ರೋಗ ತಜ್ಞರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ಇವರು ಮಾತನಾಡಿ, ವಿದ್ಯಾರ್ಥಿನಿಯನಿಯರಿಗೆ ಕಲಿಕೆಯ ಜೊತೆಗೆ ಅವರ ವೈಯಕ್ತಿಕ ಆರೋಗ್ಯ , ವೈಯಕ್ತಿಕ ಕಾಳಜಿ,ಸ್ವಚ್ಛತೆ ಮುಖ್ಯ ಈ ಕುರಿತು ಮಾಹಿತಿ ಹಾಗೂ ವಿವಿಧ ಪರಿಹಾರ ನೀಡಿದರು.
ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಸುಬ್ರಮಣ್ಯ ,ಕಾಲೇಜಿನ ನಿರ್ದೇಶಕಿ ಮಮತಾ ವೈಸ್ ಪ್ರಿನ್ಸಿಪಾಲ್ ಸುಜಾತ ಹಾಗೂ ಮಹಿಳಾ ಕುಂದು ಕೊರತೆ ಪರಿಹಾರ ಸಮಿತಿಯ ಸಂಚಾಲಕಿ ರಾಝಿಕಾ ,ಎಲ್ಲಾ ಉಪನ್ಯಾಸಕರು ,
ಉಪನ್ಯಾಸಕೇತರರು ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಉಪನ್ಯಾಸಕಿ ಅನುಪಮ ಭಟ್ ನಿರೂಪಿಸಿದರು,ವಿದ್ಯಾರ್ಥಿನಿ ಅನೂಷ ಸ್ವಾಗತಿಸಿದರು, ವಿದ್ಯಾರ್ಥಿನಿ ಐಶ್ವರ್ಯ ವಂದಿಸಿದರು.