ಕಾಂಗ್ರೆಸ್ ಪಕ್ಷದ ಮುಖಂಡ ಸೀತಾರಾಮ ಶೆಟ್ಟಿ ಕೇರಿಕೊಡ್ಲು ನಿಧನ

ಕುಂದಾಪುರ-ಕಾಂಗ್ರೆಸ್ ಪಕ್ಷದ ಮುಖಂಡರಾದ ಹೊಸಾಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕೇರಿಕೊಡ್ಲು ನಿವಾಸಿ ಸೀತಾರಾಮ ಶೆಟ್ಟಿ (65) ಅವರು ಅಲ್ಪಕಾಲಿಕ ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ಅವರು ಪತ್ನಿ,ಪುತ್ರ,ಪುತ್ರಿ ಮತ್ತು ಸಹೋದರ,
ಸಹೋದರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಸುದೀರ್ಘ ನಲವತ್ತಕ್ಕೂ ಹೆಚ್ಚಿನ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಸೇವೆ ಸಲ್ಲಿಸಿದ್ದ ಅವರು ಮೂರು ಬಾರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಸಾಮಾಜಿಕ ಹಾಗೂ ಧಾರ್ಮಿಕ ಕೆಲಸದಲ್ಲಿ ತೊಡಗಿ ಕೊಂಡಿದ್ದು ಜನಪ್ರಿಯತೆ ಪಡೆದಿದ್ದರು.
ಅಂಬಾ ಕ್ರಿಕೆಟ್ ಕ್ಲಬ್ ತಂಡದ ಸ್ಥಾಪಕ ಅಧ್ಯಕ್ಷರಾಗಿದ್ದು ಹಲವು ವರ್ಷಗಳಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜನೆ ಮಾಡುವ ಮುಖೇನ ಹಲವಾರು ಉತ್ಸಾಹಿ ಯುವಕರಿಗೆ ಪ್ರೇರಣೆ ನೀಡಿದ್ದರು.
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದ ಅವರು ನೂರಾರು ಶವಗಳನ್ನು ದಫನ ಮಾಡುವಲ್ಲಿ ತಮ್ಮ ತಾವು ತೊಡಗಿಸಿಕೊಂಡಿದ್ದಾರೆ.
ಮೃತರ ಗೌರವಾರ್ಥವಾಗಿ ಮುಳ್ಳಿಕಟ್ಟೆ ಪೇಟೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದರ ಮುಖೇನ ವ್ಯಾಪಾರಸ್ಥರು ವಿಶೇಷವಾದ ರೀತಿಯಲ್ಲಿ ಗೌರವವನ್ನು ಸಲ್ಲಿಸಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಸಂತಾಪವನ್ನು ಸೂಚಿಸಿದ್ದಾರೆ.




















































































































































































































































































































































































































































































































































































































































































































































































































































































































































































































































































































































































































































































































































































































































































