ಎಎನ್ ಎಫ್ ಎನ್ ಕೌಂಟರ್ ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿ,ಮುಂದುವರಿದ ಕೂಂಬಿಂಗ್ ಕಾರ್ಯಾಚರಣೆ

Share

Advertisement
Advertisement

ಉಡುಪಿ:ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಕಬ್ವಿನಾಲೆ ಸೀತಂಬೈಲುವಿನಲ್ಲಿ ಸೋಮವಾರ ರಾತ್ರಿ ಎ ಎನ್ ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲ್ ಮುಖಂಡ ವಿಕ್ರಂ ಗೌಡ ಹತನಾಗಿದ್ದಾನೆ.ನಕ್ಸಲ್ ನಿಗ್ರಹ ದಳದಿಂದ
ಕೂಂಬಿಂಗ್ ಕಾರ್ಯಾಚರಣೆ ಮುಂದುವರಿದಿದೆ.
ಹೊಟೇಲ್ ನಲ್ಲಿ ಸಪ್ಲೇಯರ್ ಆಗಿ‌ ಕೆಲಸ ನಿರ್ವಹಿಸುತ್ತಿದ್ದ ವಿಕ್ರಂ ಗೌಡ.ನಕ್ಸಲ್ ಚಟುವಟಿಕೆಗೆ ಸೇರ್ಪಡೆಯಾಗಿದ್ದ.ಹೆಬ್ರಿ ತಾಲೂಕಿನ ಕೂಡ್ಲು ನಿವಾಸಿಯಾಗಿದ್ದಾನೆ.ನಕ್ಸಲ್ ಮುಖಂಡನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.
ಹೆಬ್ರಿ ತಾಲೂಕಿನ ಪೀತ್‌ಬೈಲಿನಲ್ಲಿ ಎಎನ್‌ಎಫ್ ಅಧಿಕಾರಿಗಳು ಹಾಗೂ ನಕ್ಸಲ್‌‌ರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೋಸ್ಟ್ ವಾಟೆಂಡ್ ವಿಕ್ರಂ ಗೌಡ ಎನ್‌ ಕೌಂಟರ್ ನಲ್ಲಿ ಹತರಾಗಿದ್ದಾರೆ.
ನಕಲ್ಸರ್ ಮತ್ತು ಪೋಲೀಸರ ನಡುವೆ ಗುಂಡಿನ ಚಕಮಕಿ ನಡೆದಿದ್ದ,ಈ ವೇಳೆ ನಡೆದ ಎನ್‌ ಕೌಂಟರ್ ನಲ್ಲಿ ವಿಕ್ರಂ ಗೌಡ ಮೃತಪಟ್ಟಿದ್ದಾರೆ.ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ಮಾಡಲಾಗಿತ್ತು.
ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ,ಕಬಿನಿ-2 ರ ಮುಖಂಡ ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಗೌಡ (46) ಪೊಲೀಸರ ಗುಂಡೇಟಿಗೆ ಹತನಾಗಿದ್ದೇನೆ.
ಹೆಬ್ರಿಯಿಂದ ಸುಮಾರು 15 ಕಿ.ಮೀ. ದೂರದ ನಾಡ್ಪಾಲು ಗ್ರಾ.ಪಂ. ವ್ಯಾಪ್ತಿಯ ಪಿತ್‌ಬೈಲಿನ ದಟ್ಟ ಕಾನನದಲ್ಲಿ ಸೋಮವಾರ ರಾತ್ರಿ ನಡೆದ ಎಎನ್‌ಎಫ್ ಕಾರ್ಯಾಚರಣೆ ವೇಳೆ ಅರಣ್ಯದಲ್ಲಿ ಕೊನೆಯುಸಿರೆಳೆದ್ದಾರೆ‌.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page