ರಾಜ್ಯ ಮಟ್ಟದ ಅಬಾಕಸ್ ಸ್ಪರ್ಧೆ:ಶರಧಿ.ಆರ್,ಆರಾಧ್ಯ.ಆರ್ ಗೆ ಪ್ರಶಸ್ತಿ

ಕುಂದಾಪುರ:ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಅಬಕಸ್ ಸ್ಪರ್ಧೆಯಲ್ಲಿ ಸ.ಕಿ ಪ್ರಾ.ಶಾಲೆ ಅರಾಟೆ( ದೈವಸ್ಥಾನ) ಇಲ್ಲಿನ ಎರಡನೇ ತರಗತಿ ವಿದ್ಯಾರ್ಥಿ ಶರಧಿ. ಆರ್ ಹಾಗೂ ಕೊಂಚಾಡಿ ರಾಧಾ ಶೆಣೈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿ ಗಂಗೊಳ್ಳಿ ಇಲ್ಲಿನ 5ನೇ ತರಗತಿ ವಿದ್ಯಾರ್ಥಿನಿ ಆರಾಧ್ಯ.ಆರ್ ಪ್ರಶಸ್ತಿ ಗಳಿಸಿದ್ದಾರೆ.ಅರಾಟೆ ರಾಘವೇಂದ್ರ ಪೂಜಾರಿ ಮತ್ತು ಯಶೋದ ದಂಪತಿಗಳ ಪುತ್ರಿಯರು.





















































































































































































































































































































































































































































































































































































































































































































































































































































































































































































































































































































































































































































































































































































































































































