ಸಾಮಾಜಿಕ ಕಳಕಳಿ ಮನೋಭಾವ ಹೊಂದಿರುವ ವ್ಯಕ್ತಿ ದಿ.ಎನ್.ಎ ಪೂಜಾರಿ ಅವರ ಕಾರ್ಯ ಸ್ಮರಣೀಯ

ಬೈಂದೂರು:ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರನ್ನು ಗಳಿಸಿರುವ ಹಿರಿಯರಾದ ದಿ.ನಾರಾಯಣ ಅನಂತ ಪೂಜಾರಿ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಕೆರ್ಗಾಲು ರಾಧಾಕೃಷ್ಣ ಸಭಾಭವನದಲ್ಲಿ ಭಾನುವಾರ ನಡೆಯಿತು.ದಿ.ನಾರಾಯಣ ಪೂಜಾರಿ ಅವರನ್ನು ಊರಿನ ಜನರು ಎನ್.ಎ ಪೂಜಾರಿ ಎಂದೆ ಕರೆಯುತ್ತಾರೆ.ಅತ್ಯಂತ ಕಡು ಬಡತನದಲ್ಲಿ ಹುಟ್ಟಿದ ಎನ್.ಎ ಪೂಜಾರಿ ಅವರು ಸ್ವಂತ ಪರಿಶ್ರಮದ ಮೂಲಕ ಮುಂಬೈನಲ್ಲಿ ರಾತ್ರಿ ಶಿಕ್ಷಣ ಪಡೆದು ಉದ್ಯೋಗಕ್ಕಾಗಿ ಸ್ನೇಹಿತರ ಜತೆಗೆ ವಿದೇಶಕ್ಕೆ ತೆರಳಿದ ಅವರು ಪೆಟ್ರೋಲಿಯಂ ಘಟಕದಲ್ಲಿ ಇಂಜಿನಿಯರ್ ಆಗಿ ಕೆಲಸವನ್ನು ಪಡೆದು ಜೀವನವನ್ನು ಕಟ್ಟಿಕೊಳ್ಳುವುದರ ಮೂಲಕ ಯಶಸ್ಸಿನ ಹಾದಿಯೊಂದಿಗೆ ಹೂಟ್ಟೂರಿಗೆ ಬಂದು ಹೊಟೇಲ್ ಉದ್ಯಮ ಆರಂಭಿಸಿ ಹಲವಾರು ಜನರಿಗೆ ಕೆಲಸವನ್ನು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.ಎಂಟು ಭಾಷೆ ಪ್ರಾವಿಣ್ಯತೆಯನ್ನು ಹೊಂದಿರುವ ಎನ್.ಎ ಪೂಜಾರಿ ಅವರಿಗೆ ರಾಜಕೀಯ ನಂಟಿದೆ.ಕಲೆ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿದ್ದಾರೆ.ಅವರ ಮಗ ಪ್ರಕಾಶ ಪೂಜಾರಿ ಅವರ ನೇತೃತ್ವದದಲ್ಲಿ ಎನ್,ಎ ಪೂಜಾರಿ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಅವರ ಹಿತೈಷಿಗಳೊಂದಿಗೆ ನಡೆದಿದೆ.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರು ಮಾತನಾಡಿ,ಎನ್.ಎ ಪೂಜಾರಿ ಅವರು ಅಪ್ರತಿಮ ಹೋರಾಟಗಾರರಾಗಿದ್ದಾರೆ.ತಮ್ಮ ರಾಜಕೀಯ ಜೀವನದಲ್ಲಿ ಅಧಿಕಾರಿ ವರ್ಗದವರಿಗೆ ಗೌರವ ನೀಡುವ ಕೆಲಸವನ್ನು ಮಾಡುತ್ತಿದ್ದ ಅವರು.ತಮ್ಮ ಅಂತಿಮ ದಿನಗಳ ಸಂದರ್ಭದಲ್ಲಿಯೂ ಅಧಿಕಾರಿಗಳನ್ನು ಭೇಟಿ ಆರೋಗ್ಯ ವಿಚಾರಿಸಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಆಗಿದೆ.
ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧಕ್ಷರಾದ ಬಾಬು ಹೆಗ್ಡೆ ಮಾತನಾಡಿ,ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದಿರುವ ಎನ್.ಎ ಪೂಜಾರಿ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ನಿಕಟವರ್ತಿ ಆಗಿದ್ದಾರೆ.ಎನ್.ಎ ಪೂಜಾರಿ ಅವರ ವ್ಯಕ್ತಿತ್ವ ಮತ್ತು ಗುಣ ಯಾರಿಗೂ ಹೊಲಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಅವರು ಎನ್.ಎ ಪೂಜಾರಿ ಅವರ ಓಡನಾಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ,ಎನ್.ಎ ಪೂಜಾರಿ ಮತ್ತು ಅವರ ರಾಜಕೀಯ ನಂಟು ಮತ್ತು ಸ್ಪರ್ಧೆ ಬಗ್ಗೆ ತಮ್ಮ ಮನದಾಳದ ಮಾತನ್ನು ಹೇಳಿದರು.ಈ ಸಂದರ್ಭದಲ್ಲಿ ಎನ್.ಎ ಪೂಜಾರಿ ಅವರ ಕುಟುಂಬಿಕರು,ಸ್ನೇಹಿತರು,ಹಿತೈಷಿಗಳು,ಬಂಧು ಮಿತ್ರರರು ಉಪಸ್ಥಿತರಿದ್ದರು.






















































































































































































































































































































































































































































































































































































































































































































































































































































































































































































































































































































































































































































































































































































































































































