ಬಂಟರ ಯಾನೆ ನಾಡವರ ಸಂಘ ಬೈಂದೂರು 30 ಸಂಭ್ರಮ

ಬೈಂದೂರು:ಬಂಟರ ಯಾನೆ ನಾಡವರ ಸಂಘ ಬೈಂದೂರು ಅದರ 30 ರ ಸಂಭ್ರಮ ಕಾರ್ಯಕ್ರಮ ಹೆಮ್ಮಾಡಿ ಜಯಶ್ರೀ ಸಭಾಭವನದಲ್ಲಿ ಭಾನುವಾರ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಗಣಹೋಮವನ್ನು ನೆರವೇರಿಸಲಾಯಿತು.ಭವ್ಯ ಮೆರವಣಿಗೆ ಮೂಲಕ ಅತಿಥಿಗಳನ್ನು ಚಂಡೆವಾದನ ದೊಂದಿಗೆ ಬರಮಾಡಿಕೊಳ್ಳಲಾಯಿತು.ವಿವಿಧ ತಂಡಗಳಿಂದ ಭಜನಾ ಸ್ಪರ್ಧೆ ಕಾರ್ಯಕ್ರಮ ಜರುಗಿತು.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ,ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಿಸಲಾಯಿತು.ಭಜನ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಸಾಧಕರನ್ನು ಗೌರವಿಸಲಾಯಿತು.
ಶ್ರೀ ಮಹಾಲಿಂಗೇಶ್ವರ ದೇಸ್ಥಾನ ಬಸ್ರೂರು ಆಡಳಿತ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಸಂಘಗಳನ್ನು ರಚಿಸಿಕೊಳ್ಳುವುದರ ಮುಖೇನ ಸಮುದಾಯದ ಏಳಿಗೆಗೆ ಶ್ರಮಿಸುವ ಕೆಲಸವನ್ನು ಮಾಡಲಾಗುತ್ತಿದ್ದು.ಸಂಘದದಲ್ಲಿ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕಿದೆ.ಧೈರ್ಯದಿಂದ ಯುವಕರು ನಾನಾ ರಂಗಗಳಲ್ಲಿ ತೊಡಗಿಕೊಂಡಿದ್ದರ ಪರಿಣಾಮ ದಿಂದಾಗಿ ಉದ್ಯಮಿಗಳು,ಡಾಕ್ಟರ್ಸ್‍ಗಳು,ಇಂಜಿಯರ್ ಆಗಲು ಸಾಧ್ಯವಾಯಿತು.ಸರಕಾರಿ ಸವಲತ್ತುಗಳಿಗೆ ಮೊರೆ ಹೋಗದೆ ಸ್ವ ಸಾಮಥ್ರ್ಯದಿಂದ ಸವಲತ್ತುಗಳನ್ನು ಪಡೆದುಕೊಳ್ಳುವುದರ ಮುಖೇನ ಸಾಧಿಸಿ ತೋರಿಸಿದ್ದಾರೆ.ಬಂಟರ ಮೂಲ ಎನ್ನುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಗಿದೆ.ಬುದ್ದಿವಂತರ ಜಿಲ್ಲೆಯಲ್ಲಿ ಬೆಳೆದಂತಹ ನಾವು ಇಂದು ಎಲ್ಲಾ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದೇವೆ.ಅಶಕ್ತರಿಗೆ ನೆರವು ನೀಡುವುದರ ಮುಖೇನ ಸಮಾಜದಲ್ಲಿನ ಹಿಂದುಳಿದ ವರ್ಗವನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು.ನಮ್ಮ ಒಗ್ಗಟ್ಟನ್ನು ಉಳಿಸಿಕೊಂಡು ಪರಸ್ಪರ ಭಾವನೆಯೊಂದಿಗೆ ಬದುಕಬೇಕು ಎಂದು ಹೇಳಿದರು.
ಬೈಂದೂರು ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದೆ ಅಧ್ಯಕ್ಷತೆ ವಹಿಸಿ ಮಾತನಾಡಿ,ಹಲವಾರು ಏಳು ಬೀಳುಗಳ ನಡುವೆ ಬಂಟರ ಯಾನೆ ನಾಡವರ ಸಂಘ ಬೈಂದೂರು ಇಂದು ಶಕ್ತಿಶಾಲಿ ಸಂಘವಾಗಿ ಬೆಳೆದು ನಿಂತ್ತಿದೆ.ಎಲ್ಲರ ಸಹಕಾರ ದಿಂದ 30 ರ ಸಂಭ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಗಿದೆ ಎಂದರು.
ಉದ್ಯಮಿ ಜಗದೀಶ ಶೆಟ್ಟಿ ಕುದ್ರುಕೋಡು ಮಾತನಾಡಿ,ನಮ್ಮ ದುಡಿಮೆಯ ಒಂದಂಶ ಹಣವನ್ನು ಸಂಘಕ್ಕೆ ವಿನಿಯೋಗ ಮಾಡುವುದರಿಂದ ಸಮಾಜದಲ್ಲಿನ ಅಶಕ್ತರ ಕುಟುಂಬಗಳಿಗೆ ನೆರವನ್ನು ನೀಡಲು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬಂಟರ ಸಂಘ ಬೆಂಗಳೂರು ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ,ನಿವೃತ್ತ ಪ್ರಿನ್ಸಿಪಾಲ್ ರಾಧಕೃಷ್ಣ ಶೆಟ್ಟಿ,ಬಂಟರ ಸಂಘ ಬೆಂಗಳೂರು ಚೇರ್‍ಮೆನ್ ವಿದ್ಯಾರ್ಥಿ ವೇತನ ಪ್ರಶಸ್ತಿ ಸಮಿತಿ ಉಮೇಶ್ ಕುಮಾರ್ ಶೆಟ್ಟಿ,ಬಂಟರ ಸಂಘ ಬೆಂಗಳೂರು ಗೌರವ ಕಾರ್ಯದರ್ಶಿ ವಿಜಯ ಶೆಟ್ಟಿ ಹಾಲಾಡಿ,ಉದ್ಯಮಿ ಜಯಶೀಲ ಶೆಟ್ಟಿ,ಮಂಜುನಾಥ ಶೆಟ್ಟಿ ಗಂಟಿಹೊಳೆ,ಸುಭಾಶ್ಚಂದ್ರ ಶೆಟ್ಟಿ ಸಾಲ್ಗದ್ದೆ,ಕೋಶಧಿಕಾರಿ ಜಯರಾಮ ಶೆಟ್ಟಿ,ಕಾರ್ಯದರ್ಶಿ ನಿತಿನ್ ಶೆಟ್ಟಿ,ಗೌರವಾಧ್ಯಕ್ಷ ವಾದಿರಾಜ ಶೆಟ್ಟಿ,ಚಿತ್ತೂರು ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು..ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದೆ ಸ್ವಾಗತಿಸಿದರು.ಚಂದ್ರಶೇಖರ ಶೆಟ್ಟಿ ನಿರೂಪಿಸಿದರು.ಜಯರಾಮ ಶೆಟ್ಟಿ ವಂದಿಸಿದರು.










































































































































































































































































































































































































































































































































































































































































































































































































































































































































































































































































































































































































































































































































































































































































