ಅಬ್ಬರಿಸಿದ ಮಳೆಗೆ ಉಕ್ಕೇರಿದ ಕಡಲು:ಜನರಲ್ಲಿ ಮೂಡಿದ ಆತಂಕ

ಕುಂದಾಪುರ:ಬುಧವಾರ ಸುರಿದ ಭಾರಿ ಗಾಳಿ ಮಳೆಗೆ ಕಡಲು ಉಕ್ಕೇರಿದ ಪರಿಣಾಮ ಕಂಚುಗೋಡು ಭಾಗದಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿದೆ.ಅಲೆಗಳ ಹೊಡೆತಕ್ಕೆ ತೀರ ಪ್ರದೇಶದಲ್ಲಿ ಲಂಗರು ಹಾಕಿದ ದೋಣಿಗಳಿಗೆ ಹಾನಿ ಉಂಟಾಗಿದೆ.ಸಮುದ್ರ ನೀರು ಮನೆಗಳಿಗೂ ನುಗ್ಗಿದ್ದು ಜನರ ನಿದ್ದೆಗೆಡಿಸಿದೆ.
ಏಕಾಏಕಿ ಹವಾಮಾನದಲ್ಲಿ ಏರುಪೇರು ಉಂಟಾಗಿದ್ದರಿಂದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಭಾಗದ ಪ್ರದೇಶದಲ್ಲಿ ಮಳೆ ಅಬ್ಬರಿಸಿ ಸುರಿದಿದೆ.ಸಮುದ್ರ ಅಲೆಗಳು ತೀರಾ ಪ್ರದೇಶದತ್ತ ನುಗ್ಗಿದ್ದರಿಂದ ಕಂಚುಗೋಡು ಭಾಗದಲ್ಲಿ ಸಾಕಷ್ಟು ಹಾನಿ ಉಂಟಾಗಿದೆ.ಕೃಷಿ ಭೂಮಿಗಳು ನೀರಿನಲ್ಲಿ ಮುಳುಗಿದೆ.