ಬಿ.ಎಚ್.ಪಿ ಮೀನುಗಾರಿಕಾ ಬೋಟ್ ಶುಭಾರಂಭ

Share

ಕುಂದಾಪುರ:ಮೀನುಗಾರಿಕಾ ವೃತ್ತಿಯಲ್ಲಿ ಹಲವಾರು ವರ್ಷಗಳ ಅನುಭವವನ್ನು ಹೊಂದಿರುವ ಮತ್ಸೋದ್ಯಮಿಗಳಾದ ಉಪ್ಪುಂದ ನಾಗರಾಜ ಖಾರ್ವಿ ಮತ್ತು ಸುಬ್ರಹ್ಮಣ್ಯ ಖಾರ್ವಿ ಮಾಲೀಕತ್ವದ ಬಿ.ಎಚ್.ಪಿ ನೂತನ ಬೋಟ್‍ನ ಶುಭಾರಂಭ ಮತ್ತು ಬಲೆ ಮೂಹುರ್ತ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಂಗೊಳ್ಳಿ ಬಂದರಿನಲ್ಲಿ ಭಾನುವಾರ ನಡೆಯಿತು.
ಬಿ.ಎಚ್.ಪಿ ಬೋಟ್‍ನ ಶುಭಾರಂಭ ಕಾರ್ಯಕ್ರಮದ ಅಂಗವಾಗಿ ಹುಲಿ ವೇಷ ಕುಣಿತ ಸೇವೆಯನ್ನು ಮಾಡಲಾಯಿತು.ಐವತ್ತಕ್ಕೂ ಅಧಿಕ ಹುಲಿವೇಷ ದಾರಿಗಳು ಬೋಟ್‍ನಲ್ಲಿ ನೃತ್ಯ ಮಾಡುವುದರ ಮುಖೇನ ಸೇವೆಯನ್ನು ನೀಡಿದರು.ಗಂಗೊಳ್ಳಿ ಭಾಗದ ಸಮುದದಲ್ಲಿ ನೂತನ ಬೋಟ್‍ನ್ನು ಚಲಾಯಿಸುವುದರ ಮುಖೇನ ಬೋಟ್ ಚಾಲನೆಯನ್ನು ನೀಡಲಾಯಿತು.ಮೀನಿಗಾರಿಕಾ ವಲಯಕ್ಕೆ ನೂತನ ಬೋಟ್ ಸೇರ್ಪಡೆ ಯಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹತ್ತಾರು ಜನರಿಗೆ ಕೆಲಸ ಸಿಗಲಿದೆ.
ಬಿ.ಎಚ್.ಪಿ ಬೋಟ್ ಮಾಲೀಕರಾದ ನಾಗರಾಜ ಖಾರ್ವಿ ಉಪ್ಪುಂದ ಮಾತನಾಡಿ,ನಮ್ಮ ತಂದೆ ಅವರ ಕಾಲದಿಂದಲೂ ಮೀನುಗಾರಿಕಾ ಕ್ಷೇತ್ರದಲ್ಲಿ ಉದ್ಯಮವನ್ನು ಮಾಡಿಕೊಂಡು ಬರಲಾಗುತ್ತಿದ್ದು.ಮೀನುಗಾರಿಕಾ ಕೆಲಸದಿಂದಲೆ ಬದುಕನ್ನು ಕಟ್ಟಿಕೊಂಡಿದ್ದೇವೆ.ಹೊಸ ಕನಸು ಮತ್ತು ಒಂದಿಷ್ಟು ಜನರಿಗೆ ಉದ್ಯೋಗವನ್ನು ದೊರಕಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಬೋಟ್ ಮಾಡಲಾಗಿದೆ.ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು.
ಈ ಸಂದರ್ಭದಲ್ಲಿ ಬಿ.ಎಚ್.ಪಿ ಬೋಟ್‍ನ ಮಾಲೀಕರ ಬಂಧುಗಳು,ಹಿತೈಷಿಗಳು,ಸ್ನೇಹಿತರು,ಮೀನುಗಾರರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page