ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಎನ್.ಎಸ್.ಎಸ್ ಘಟಕದ ಉದ್ಘಾಟನಾ ಕಾರ್ಯಕ್ರಮ
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ (ಎನ್ .ಎಸ್.ಎಸ್) ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ರಾಷ್ಟ್ರೀಯ ಸೇವಾ ಯೋಜನೆ ಎಂಬುದು ವಿದ್ಯಾರ್ಥಿ ಜೀವನದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಹೊಂದುವಲ್ಲಿ ಸಹಕರಿಸುವುದು ,ಹಾಗೂ “ನನಗಾಗಿ ಅಲ್ಲ ನಿಮಗಾಗಿ” ಭಾವೈಕ್ಯತೆಯ ಮಹತ್ವ ಮತ್ತು ಸ್ವಚ್ಛತಾ ಅಭಿಯಾನದ ಕುರಿತು ಹಾಗೂ ಯೋಜನೆಯ ಉದ್ದೇಶ,ಗುರಿ,ಪ್ರಯೋಜನದ ಕುರಿತು ಸವಿವರವನ್ನು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ಪ್ರಜ್ಞಾ ಮಾರ್ಪಳ್ಳಿ ಸಹಾಯಕ ಪ್ರಾಧ್ಯಾಪಕಿ ಪೂರ್ಣ ಪ್ರಜ್ಞಾ ಸಂಧ್ಯಾ ಕಾಲೇಜು ಉಡುಪಿ ಇವರು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.ಕಾಲೇಜಿನ ಸಂಸ್ಥಾಪಕರಾದ ಸುಬ್ರಮಣ್ಯ , ಕಾಲೇಜಿನ ನಿರ್ದೇಶಕಿ ಮಮತಾ ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ರಾಝಿಕಾ ,ಎನ್.ಎಸ್.ಎಸ್ ಘಟಕ ಸಂಚಾಲಕ ಬೆನಕ ಮತ್ತು ಉಪನ್ಯಾಸಕಿ ಅನುಪಮ ಭಟ್ ಹಾಗೂ ಎಲ್ಲಾ ಉಪನ್ಯಾಸಕರು ,
ಉಪನ್ಯಾಸಕೇತರರು ಎನ್.ಎಸ್.ಎಸ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಯಶಸ್ವಿನಿ ನಿರೂಪಿಸಿದರು. ಆದರ್ಶ್ ಸ್ವಾಗತಿಸಿದರು. ವಿದ್ಯಾರ್ಥಿನಿ ಹೇಮ ವಂದಿಸಿದರು.