ಹೆಬ್ರಿಯಲ್ಲಿ ಮೇಘ ಸ್ಪೋಟ:ಹಠಾತ್ ಜಲ ಪ್ರವಾಹದಿಂದ ಮನೆ,ಕೃಷಿ ಭೂಮಿಗೆ ನುಗ್ಗಿದ ನೀರು

ಉಡುಪಿ:ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಬಲ್ಲಾಡಿಯಲ್ಲಿ ಏಕಾಏಕಿ ಸುರಿದ ಭಾರಿ ಮಳೆಗೆ ಹಠಾತ್ ಪ್ರವಾಹ ಉಂಟಾಗಿ ಮನೆ ಮಠ,ಕೃಷಿ ಭೂಮಿಗೆ ನುಗ್ಗಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಜಲ ಪ್ರವಾಹದಿಂದಾಗಿ ಮನೆ ಅಂಗಳದಲ್ಲಿ ನಿಲ್ಲಿಸಿದ ಕಾರು, ಬೈಕ್ ನೀರಿನಲ್ಲಿ ತೇಲಿಕೊಂಡು ಹೋಗಿದ್ದು ಪ್ರವಾಹದ ಭೀಕರತೆಗೆ ಸಾಕ್ಷಿ ಆಗಿತ್ತು.
ನವರಾತ್ರಿ ಸಂಭ್ರಮದಲ್ಲಿದ್ದ ಜನರು ಮೇಘಸ್ಪೋಟ ದಿಂದಾಗಿ ಆತಂಕಿತ ರಾಗಿದ್ದಾರೆ.
ಕಬ್ಬಿನಾಲೆ ಭಾಗದ ಪರ್ವತ ಶ್ರೇಣಿಯಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದ ಪ್ರವಾಹ ರೂಪದಲ್ಲಿ ನೀರು ಹರಿದು ಬಂದಿದೆ.ನಮ್ಮ ಜೀವ ಮಾನದಲ್ಲಿ ಇಂತಹ ಘಟನೆಗಳನ್ನು ನೋಡುತ್ತಿರುವುದು ಇದೆ ಮೊದಲು ಎಂದು ಗ್ರಾಮಸ್ಥರು ತಮ್ಮ ಆತಂಕವನ್ನು ಹೊರ ಹಾಕಿದ್ದಾರೆ.ಅಗ್ನಿ ಶಾಮಕ ದಳದ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ.