ಶ್ರೀ ಮಹಿಷಮರ್ದಿನಿ ದೇವಸ್ಥಾನ ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು,ನಾ ರಾತ್ರಿ ಮಹೋತ್ಸವ ಸಂಭ್ರಮ

Share

Advertisement
Advertisement
Advertisement

ಕುಂದಾಪುರ:ಶ್ರೀ ಕ್ಷೇತ್ರ ಕಾನ್‍ಬೇರು ಹೊಸೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಕಾರ್ಯಕ್ರಮ ಅಕ್ಟೋಬರ್ 3 ರಿಂದ ಆರಂಭಗೊಂಡು ಅಕ್ಟೋಬರ್ 12 ರ ತನಕ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.
ಶರನ್ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವಿಯ ಸನ್ನಿಧಾನದಲ್ಲಿ ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ಚಂಡಿಕಾ ಹೋಮ,ದುರ್ಗಾ ಹೋಮ ಮತ್ತು ವಿಶೇಷ ಪೂಜೆ ಜರುಗಲಿದೆ.ಸಂಜೆ 5 ರಿಂದ ಶ್ರೀ ದೇವಿಯ ಕಲ್ಪೋಕ್ತ ಪೂಜೆ,ಸಹಸ್ರ ನಾಮಾರ್ಚನೆ,ಚಂಡಿಕಾ ಸಪ್ತಶತಿ ಪಾರಾಯಣ ಸೇವೆ ನಡೆಯಲಿದ್ದು ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.ಪ್ರತಿದಿನ ರಾತ್ರಿ 9 ರಿಂದ ಅನ್ನದಾನ ಸೇವೆ ಹಾಗೂ ಅಕ್ಟೋಬರ್ 12 ರಿಂದ ವಿಜಯ ದಶಮಿ ಕಾರ್ಯಕ್ರಮದೊಂದಿಗೆ ನವರಾತ್ರಿ ಉತ್ಸವ ಸಂಪನ್ನ ಗೊಳ್ಳಲಿದೆ ಎಂದು ದೇವಳದ ಆಡಳಿತ ಸಮಿತಿ ತಿಳಿಸಿದೆ.ದೇವತಾ ಕಾರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿ ಕೊಂಡಿದೆ.
ದೇವಸ್ಥಾನದ ಅಧ್ಯಕ್ಷರಾದ ಡಿ ಶಿವರಾಮ ಶೆಟ್ಟಿ ದೇವಲ್ಕುಂದ ಮಾತನಾಡಿ,400 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಶ್ರೀ ಮಹಿಷ ಮರ್ದಿನಿ ದೇವಸ್ಥಾನವು ಬಹಳಷ್ಟು ಕಾರಣಿಕ ಶಕ್ತಿಯನ್ನು ಹೊಂದಿರುವ ಸಾನಿಧ್ಯವಾಗಿದೆ.ಭ್ತಕ್ತರ ಸಹಕಾರ ದಿಂದ ಕಳೆದ ಮೂರು ವರ್ಷಗಳ ಹಿಂದೆ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು.ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಪ್ರವೀಣ ಶೆಟ್ಟಿ ಮಾತನಾಡಿ,ಕಷ್ಟ ಎಂದು ಬೇಡಿ ಬಂದವರ ಸಂಕಷ್ಟವನ್ನು ನಿವಾರಿಸುವ ಮಹಿಷಮರ್ದಿನಿ ದೇವಿಯ ಶಕ್ತಿಯ ಅಪಾರವಾದದ್ದು ಕ್ಷೇತ್ರದ ಬಗ್ಗೆ ತಿಳಿಸಿದರು.
ಕಾರ್ಯದರ್ಶಿ ರಾಜೀವ ಶೆಟ್ಟಿ ಸುಣ್ಣದಗುಂಡಿ ಮಾತನಾಡಿ,ಹೊಸೂರು ಕಾನ್ನಬೇರು ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು,ಗ್ರಾಮಸ್ಥರು ಭಾಗಿ ಆಗಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿ ಕೊಂಡರು.
ಸೇವಾಕರ್ತರಾದ ನಾಗರತ್ನ ನಸರಸಿಂಹ ಶೆಟ್ಟಿ ಮಾತನಾಡಿ,ನವರಾತ್ರಿ ಉತ್ಸವದ ಅಂಗವಾಗಿ ಹತ್ತು ದಿನವೂ ಚಂಡಿಕಾ ಹೋಮ ನಡೆಯಲಿದ್ದು ಅನ್ನದಾನ ಸೇವೆ ಕೂಡ ನಡೆಯುತ್ತದೆ ಎಂದರು.
ಅಶೋಕ ಶೆಟ್ಟಿ ದೇವಲ್ಕುಂದ ಮಾತನಾಡಿ,ಗ್ರಾಮದಲ್ಲಿ ಯಾವುದೇ ರೀತಿಯ ದೇವತಾ ಕಾರ್ಯಗಳು ನಡೆಯಬೇಕಾದರೆ ಪ್ರಥಮವಾಗಿ ಮಹಿಷ ಮರ್ದಿನಿ ದೇವಿಯನ್ನು ಭಜಿಸಿಯೆ ಕಾರ್ಯವನ್ನು ಆರಂಭಿಸಲಾಗುತ್ತದೆ ಇದು ಇಲ್ಲಿನ ಮಹತ್ವವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು,ಭಕ್ತರು,
ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page