ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೆ ಬಾಬು ಹೆಗ್ಡೆ ತಗ್ಗರ್ಸೆ ಆಯ್ಕೆ

ಬೈಂದೂರು:ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಕೆ ಬಾಬು ಶೆಟ್ಟಿ ತಗ್ಗರ್ಸೆ ಆಯ್ಕೆಯಾಗಿದ್ದಾರೆ.
ದೇವಸ್ಥಾನದ ಜಗದಾಂಬಿಕಾ ವಸತಿ ಗ್ರಹದ ಆಡಳಿತ ಮಂಡಳಿ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪ್ರಧಾನ ತಂತ್ರಿ ನಿತ್ಯಾನಂದ ಅಡಿಗ ವ್ಯವಸ್ಥಾಪನಾ, ವ್ಯವಸ್ಥಾಪನಾ ಸಮಿತಿಯ ಸದಸ್ಯರನ್ನಾಗಿ ಮಹಾಲಿಂಗ ನಾಯ್ಕ್ ಮೆಟ್ಟಿನಹೊಳೆ ಕಾಲ್ತೋಡು,ಧನಾಕ್ಷಿ ವಿಶ್ವನಾಥ ಯಡ್ತರೆ ಬೈಂದೂರು, ಸುಧಾ ಕೆ ಪಡುವರಿ ಬೈಂದೂರು, ಸುರೇಂದ್ರ ಶೆಟ್ಟಿ ಕೋಟೇಶ್ವರ ಕುಂದಾಪುರ, ಅಭಿಲಾಷ್ ಪಿ.ವಿ ಮಂಗಳೂರು, ಯು. ರಾಜೇಶ್ ಕಾರಂತ್ ಉಪ್ಪಿನಕುದ್ರು ಕುಂದಾಪುರ, ರಘುರಾಮ ದೇವಾಡಿಗ ಆಲೂರು ಕುಂದಾಪುರ ಅವರನ್ನು ಆಯ್ಕೆ ಮಾಡಲಾಗಿದೆ.
ಕುಂದಾಪುರ ಸಹಾಯಕ ಕಮೀಷನರ್ ಮಹೇಶ್ಚಂದ್ರ, ದೇವಳದ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತ್ ಶೆಟ್ಟಿ ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ದೇವಳದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಪುಷ್ಪಲತಾ ಇದ್ದರು.










































































































































































































































































































































































































































































































































































































































































































































































































































































































































































































































































































































































































































































































































































































































































