ಅ.3 ರಿಂದ ಕೂಡ್ಲು ಬಾಡುಬೆಟ್ಟು,ಶ್ರೀಶನೀಶ್ವರ ಮತ್ತು ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಸಂಭ್ರಮ

ಕುಂದಾಪುರ:ತಾಲೂಕಿನ ಪ್ರಸಿದ್ಧ ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಕೂಡ್ಲು ಬಾಡುಬೆಟ್ಟುವಿನಲ್ಲಿ ಅ.3 ರಿಂದ ಅ.12 ರ ವರೆಗೆ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಲಿದೆ.ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ವಿಶೇಷ ಪೂಜೆ,ದುರ್ಗಾಹೋಮ,ದುರ್ಗಾ ಪಾರಾಯಣ,ಚಂಡಿಕಾ ಹೋಮ,ಭಜನಾ ಕಾರ್ಯಕ್ರಮ,ಅನ್ನಸಂತರ್ಪಣೆ ಕಾರ್ಯಕ್ರಮ,ರಂಗ ಪೂಜೆ,ಪಂಚವಾಧ ಸೇವೆ ಜರುಗಲಿದೆ.ಎಂದು ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ಜಯರಾಮ ಸ್ವಾಮಿ ತಿಳಿಸಿದ್ದಾರೆ.