ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ,ಬೆಂಕಿ ಇಲ್ಲದೆ ಆಹಾರ ತಯಾರಿ ಕಾರ್ಯಕ್ರಮ

Share

Advertisement
Advertisement
Advertisement

ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಆಹಾರ ತಂತ್ರಜ್ಞಾನ ವಿಭಾಗದಿಂದ ನಿಸರ್ಗದತ್ತವಾಗಿ ದೊರೆಯುವ ಬಣ್ಣವನ್ನು ಬಳಸಿ ಅಂದರೆ ಹೂವು,ಹಣ್ಣು,ತರಕಾರಿಗಳನ್ನು ಬಳಸಿ ಹೊಸ ಬಗೆಯ ವರ್ಣರಂಜಿತ ಆಹಾರ ಪದಾರ್ಥಗಳನ್ನು ಬೆಂಕಿ ಇಲ್ಲದೆ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಅರಿವು
ಮೂಡಿಸುವ ಸಲುವಾಗಿ ಹಾನಿಕಾರಕ ಬಣ್ಣವನ್ನು ಬಳಸದೆ ಸಹಜವಾಗಿ ಸಿಗುವ ಬಣ್ಣಗಳಿಂದ ಹೊಸ ಬಗೆಯ ಪಾನೀಯ,ತಿಂಡಿ ತಿನಿಸುಗಳನ್ನು ತಯಾರಿಸಿ ಅದರ ಮಹತ್ವವನ್ನು ತಿಳಿಸಿದರು .
ಕಾಲೇಜಿನ ಸಂಸ್ಥಾಪಕ ಸುಬ್ರಮಣ್ಯ ,ಕಾಲೇಜಿನ ನಿರ್ದೇಶಕಿ ಮಮತಾ ಹಾಗೂ ಪ್ರಿನ್ಸಿಪಾಲ್ ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಉಪನ್ಯಾಸಕರಾದ ರೋಹನ್, ನಿತಿನ್,ಮನೋಜ್ , ಸವಿತಾ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ನೀಡಿದರು.ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಅನ್ಸೀಟಾ ವಿಭಾಗದ ಉಪನ್ಯಾಸಕರಾದ ಶ್ರಾವಿಕ, ಸಾಕ್ಷಿತಾ, ಬೆನಕ ಹಾಗೂ ಎಲ್ಲಾ ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಆಹಾರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement
Advertisement
Advertisement


Share

Leave a comment

Your email address will not be published. Required fields are marked *

You cannot copy content of this page