ಕಾರಿನ ಬಾನೆಟ್ ಒಳಗೆ ಬೃಹತ್ ಹೆಬ್ಬಾವು ಪತ್ತೆ
ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮದ ಕೋಣ್ಕಿ ಚಂದ್ರ ಶೆಟ್ಟಿ ಎಂಬುವರಿಗೆ ಸೇರಿದ ಕಾರಿನ ಬಾನೆಟ್ ಒಳಗೆ ಬೃಹತ್ ಗಾತ್ರದ ಹೆಬ್ಬಾವು ಪತ್ತೆ ಆದ ಘಟನೆ ಗುರುವಾರ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರ ದಿಂದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಸಂರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಹೊರಗಡೆ ತೆರಳುವ ಉದ್ದೇಶದಿಂದ ಮನೆಯಲ್ಲಿ ನಿಲ್ಲಿಸಿದ ಕಾರನ್ನು ಚಲಾಯಿಸಿ ಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಶಬ್ಧ ಬರುತ್ತಿರುವುದನ್ನು ಗಮನಿಸಿದ
ಚಂದ್ರ ಶೆಟ್ಟಿ ಅವರು ಕಾರಿನ ಬೊನೆಟ್ ತೆರೆದು ನೋಡಿದಾಗ ಹೆಬ್ಬಾವು ಪ್ರತ್ಯೇಕವಾಗಿದೆ.