ಕೆರೆಗೆ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವು

ಬೈಂದೂರು:ಕೆರೆಗೆ ಈಜಲೆಂದು ತೆರಳಿದ ಬೈಂದೂರು ತಾಲೂಕಿನ ಯೋಜನಾ ನಗರದ ನಿವಾಸಿ ನಾಗೇಂದ್ರ (13) ಹಾಗೂ ರೈಲ್ವೆ ನಿಲ್ದಾಣದ ಹತ್ತಿರದ ನಿವಾಸಿ ಶಾನು ಮೊಹ್ಮದ್ ಶಫಾನ್ (13) ಎಂಬ ವಿದ್ಯಾರ್ಥಿಗಳಿಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಪರೀಕ್ಷೆ ಮುಗಿಸಿ ಕೊಂಡು ಶಾಲೆಯಿಂದ ಮನೆಗೆ ಬಂದಿದ್ದ ವಿದ್ಯಾರ್ಥಿಗಳಿಬ್ಬರು ಬೈಂದೂರು ಕೆರೆಕಟ್ಟೆ ಕೆರೆಯಲ್ಲಿ ಈಜಲು ತೆರಳಿದ್ದಾರೆ.ಅಷ್ಟೇನು ಈಜಲು ಬಾರದ ಯುವಕರಿಬ್ಬರು ಆಯತಪ್ಪಿ ನೀರಿನಲ್ಲಿ ಮುಳುಗಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ.ಸಂಚೆ ತನಕವೂ ಮಕ್ಕಳು ಮನೆ ಬಾರದೆ ಇರುವುದನ್ನು ಗಮನಿಸಿದ ಹೆತ್ತವರು, ಬೈಂದೂರು ಠಾಣೆಗೆ ದೂರು ನೀಡಿದ್ದರು.ಹುಡುಕಾಟ ನಡೆಸಿದ ಸಮಯದಲ್ಲಿ ಕೆರೆಯಲ್ಲಿ ವಿದ್ಯಾರ್ಥಿಗಳ ಮೃತ ಶರೀರ ಪತ್ತೆ ಆಗಿದೆ.ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.