ಮರವಂತೆ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ



ಬೈಂದೂರು:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಇದರ 2023-24 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.
ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಅವರು ಮಾತನಾಡಿ,ಸಂಘದ ಆರ್ಥಿಕ ಚಟುವಟಿಕೆ ಮತ್ತು ಬೆಳವಣಿಗೆಯ ಅಭಿವೃದ್ಧಿ ಕುರಿತು ವಾರ್ಷಿಕ ವರದಿಯನ್ನು ಮಂಡಿಸಿದರು.ಹಿಂದಿನ ಮಹಾಸಭೆ ನಡವಳಿಕೆಯನ್ನು ಓದಿ ಹೇಳಿದರು.
ಸಂಘದ ಲೆಕ್ಕಿಗ ರೇಖಾ ಅವರು ನಿವ್ವಳ ಲಾಭದ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೆಟ್ ಮಂಜೂರಾತಿಯನ್ನು ಮಂಡಿಸಿ ಸದಸ್ಯರಿಂದ ಒಪ್ಪಿಗೆ ಪಡೆದು ಕೊಂಡರು.
ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಂಘದ ಲಾಭಾಂಶ,ದೀರ್ಘಾವಧಿ ಗೃಹಸಾಲ ಚಿನ್ನಾಭರಣ ಸಾಲ ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿದರು.
ಸಂಘದ ಉಪಾಧ್ಯಕ್ಷೆ ಪೂರ್ಣಿಮಾ ಮೊಗವೀರ ನಾವುಂದ,ನಿರ್ದೇಶಕರುಗಳಾದ ಶೈಲಾ ಖಾರ್ವಿ ಮರವಂತೆ,ಗಿರಿಜ ಖಾರ್ವಿ ಮರವಂತೆ,ಆಶಾ ಉಳ್ಳೂರು,ಸುಜಾತ ಪೂಜಾರಿ ನಾವುಂದ,ಸೀತಾ ಖಾರ್ವಿ ಮರವಂತೆ,ಮುಕಾಂಬು ಖಾರ್ವಿ ಬಡಾಕೆರೆ,ನಬಿಸಾ ನಾವುಂದ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಾಹಕ ಶ್ರೀನಿವಾಸ ಅಡಿಗ ಸ್ವಾಗತಿಸಿದರು.ಕು.ಛಾಯ ಪ್ರಾರ್ಥಿಸಿದರು.ಹರ್ಷ ವಂದಿಸಿದರು.
ಸುಮಾರು 950 ಕ್ಕೂ ಮಿಕ್ಕಿ ಸದಸ್ಯರು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು.
ವರದಿ:ಜಗದೀಶ ದೇವಾಡಿಗ, ನಿಮ್ಮ ಸುದ್ದಿಗಳನ್ನು ನಮ್ಮ ಜಾಲತಾಣದಲ್ಲಿ ಪ್ರಕಟಿಸಲು ಸಂಪರ್ಕಿಸಿ:9916284048