ನೀಲಿ ಫಲಕಗಳಲ್ಲಿ ನೆನಪಾಗಿ ನಿಂತವರು ಪುಸ್ತಕ ಬಿಡುಗಡೆ

Share

ಕುಂದಾಪುರ:ಲೇಖಕ ಯೋಗೀಂದ್ರ ಮರವಂತೆ ಅವರು ಬರೆದಿರುವ ನೀಲಿ ಫಲಕಗಳಲ್ಲಿ ನೆನಪಾಗಿ ನಿಂತವರು ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಯು.ಕೆಯಲ್ಲಿ ಶನಿವಾರ ನಡೆಯಿತು.
ಕನ್ನಡದ ಖ್ಯಾತ ಲೇಖಕ ವಿಮರ್ಶಕರಾದ ಎಸ್.ದಿವಾಕರ್ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ,ಇತಿಹಾಸ ಪ್ರಸಿದ್ಧರು ಇಲ್ಲಿ ಹಿಂದೊಮ್ಮೆ ವಾಸಿಸಿದ್ದ ಕಟ್ಟಡಗಳ ಗೋಡೆಯ ಮೇಲೆ ಬ್ಲೂಫ್ಲೇಕ್ ಅಥವಾ ನೀಲಿಫಲಕ ಅಳವಡಿಸುವ ಪರಂಪರೆ ಇದೆ.ಈ ಫಲಕಗಳಲ್ಲಿ ಅಲ್ಲಿ ವಾಸಿಸಿದ್ದ ವ್ಯಕ್ತಿಯ ಹೆಸರು, ಅವರ ಜೀವಮಾನ,ಸಾಧನೆಯ ಕ್ಷೇತ್ರದ ಸಂಕ್ಷಿಪ್ತ ಮಾಹಿತಿ ಇರುತ್ತದೆ.ಹಾಗೆ ನೋಡಿದರೆ ಈ ಒಂದೊಂದು ನೀಲಿ ಫಲಕದ್ದೂ ಒಂದೊಂದು ಕತೆ ಇದ್ದೆ ಇರುತ್ತದೆ.ಆಯ್ದ 28 ಸಾಧಕರ ಕುರಿತಾದ ನಿರೂಪಣೆ ಇವೊಂದು ಪುಸ್ತಕದಲ್ಲಿ ಅಚ್ಚೊತ್ತಿಸಲಾಗಿದೆ ಎಂದರು.
ಇಂತಹ ನಗರದ ಕತೆಯನ್ನು ಸೂಚ್ಯವಾಗಿ,ಧ್ವನಿಪೂರ್ಣವಾಗಿ ನಿರೂಪಿಸ ಬಯಸುವ ಲೇಖಕನಿಗೆ ಇತಿಹಾಸದ,ಅಪೂರ್ವ ಸಾಹಸಿಗಳ,ರಾಜಕೀಯ,ಕಲೆ,ಸಂಸ್ಕøತಿಗಳ ಕುರಿತು ಜ್ಞಾನವಿರಬೇಕು ಎಂದು ಅಭಿಪ್ರಾಯಪಟ್ಟರು.ಆ ಒಂದು ನಿಟ್ಟಿನಲ್ಲಿ ಇವೊಂದು ಪುಸ್ತಕವೂ ಓದುಗರ ಮೆಚ್ಚುಗೆ ಗಳಿಸಲಿದೆ ಎಂದು ಹಾರೈಸಿದರು.
ಪ್ರಾಧ್ಯಾಪಕಿ ಲೇಖಕಿ ಜಯಶ್ರೀ ಕಾಸರವಳ್ಳಿ,ಲಂಡನ್ ವಾಸಿ ಹಿರಿಯ ಮನೋವೈದ್ಯ ಡಾ. ಗೋಪಾಲಕೃಷ್ಣ ಹೆಗಡೆ,ಪೂರ್ಣಿಮಾ ಹೆಗಡೆ,ದೀಪಕ್ ಬಿ.ಜೆ ಮತ್ತಿತರರು ಉಪಸ್ಥಿತರಿದ್ದರು.

Advertisement

Share

Leave a comment

Your email address will not be published. Required fields are marked *

You cannot copy content of this page