ಮರವಂತೆ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಬೈಂದೂರು:ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ಮರವಂತೆ ಅದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಶನಿವಾರ ನಡೆಯಿತು.
ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷೆ ಸವಿತಾ ಖಾರ್ವಿ ಮಾತನಾಡಿ,ಸಂಘದ ತ್ವರಿತಗತಿ ಬೆಳವಣಿಗೆ,ಲಾಭಾಂಶ,ಧೀರ್ಘಾವಧಿ ಗೃಹಸಾಲ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.ಸಂಘದ ಲೆಕ್ಕಿಗ ರೇಖಾ ನಿವ್ವಳ ಲಾಭ್ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೆಟ್ ಮಂಜೂರಾತಿಯನ್ನು ಓದಿ ಹೇಳಿದರು.ಗುಮಾಸ್ತೆ ಚೈತ್ರಾ ಹಿಂದಿನ ಮಹಾಸಭೆ ನಡವಳಿಕೆಯನ್ನು ಓದಿ ಹೇಳಿದರು.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಸಂಘದ ಕಾರ್ಯ ಚಟುವಟಿಕೆ ಕುರಿತು ವಿವರಿಸಿದರು.ಸಂಘದ ಉಪಾಧ್ಯಕ್ಷೆ ಪೂರ್ಣಿಮಾ ಮೊಗವೀರ ನಾವುಂದ,ನಿರ್ದೇಶಕರುಗಳಾದ ಶೈಲಾ ಖಾರ್ವಿ,ಗಿರಿಜ ಖಾರ್ವಿ,ಆಶಾ ಉಳ್ಳೂರು,ಸುಜಾತ ಪೂಜಾರಿ,ಸೀತಾ ಖಾರ್ವಿ,ಮುಕಾಂಬು ಖಾರ್ವಿ,ನಬಿಸಾ ನಾವುಂದ ಉಪಸ್ಥಿತರಿದ್ದರು.ಕೆ.ಶ್ರೀನಿವಾಸ ಅಡಿಗ ಸ್ವಾಗತಿಸಿದರು.ಹರ್ಷ ವಂದಿಸಿದರು.