ಲಯನ್ಸ್ ಕ್ಲಬ್ ತ್ರಾಸಿ-ಗಂಗೊಳ್ಳಿ ಪದಗ್ರಹಣ ಕಾರ್ಯಕ್ರಮ
ಕುಂದಾಪುರ:ಲಯನ್ಸ್ ಕ್ಲಬ್ 317ಸಿ ರಿಜನ್6 ವಲಯ2 ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ತ್ರಾಸಿ ಮಿಲೇನಿಯಮ್ ಹಾಲ್‍ನಲ್ಲಿ ನಡೆಯಿತು.
ತ್ರಾಸಿ-ಗಂಗೊಳ್ಳಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಸೀನಾ ದೇವಾಡಿಗ ಎಂಜೆಎಫ್,ಕಾರ್ಯದರ್ಶಿಯಾಗಿ ನಾಗರಾಜ್ ಆಚಾರ್ಯ,ಕೋಶಾಧಿಕಾರಿ ಕಿರಣ್ ಡಿಸೋಜಾ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದರು.ಪಿಎಂಜೆಎಫ್ ಸುರೇಶ್ ಪ್ರಭು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು.ಪ್ರಾಂತೀಯ ಅಧ್ಯಕ್ಷ ಏಕನಾಥ ಬೋಳಾರ್,ವಲಯಾಧ್ಯಕ್ಷ ಜಗದೀಶ್ ಶೆಟ್ಟಿ ಕುದ್ರುಕೋಡು,ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು.ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಲಹರಿ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು,ಅಶಕ್ತ ರೋಗಿಗಳಿಗೆ ಧನಸಹಾಯ ವಿತರಿಸಲಾಯಿತು.ನಾಗರಾಜ್ ಆಚಾರ್ಯ ಸ್ವಾಗತಿಸಿದರು.ಸುಧಾಕರ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುರೇಶ್ ಆಚಾರ್ಯ ನಿರೂಪಿಸಿದರು.ನಾಗೇಶ್ ಆಚಾರ್ಯ ವಂದಿಸಿದರು.





















































































































































































































































































































































































































































































































































































































































































































































































































































































































































































































































































































































































































































































































































































































































































