ಕುಂದಾಪುರ:ಕಂಬದಕೋಣೆ ಶಿಕ್ಷಣ ಸಂಯೋಜಕ ಕೇಂದ್ರದ ಜುಲೈ ತಿಂಗಳ ಸಮಾಲೋಚನಾ ಸಭೆ ಸ.ಹಿ.ಪ್ರಾ.ಶಾಲೆ ಬಡಾಕೆರೆಯಲ್ಲಿ ಶನಿವಾರ ನಡೆಯಿತು.
ಶ್ರೀ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿಗಳು ಹಾಗೂ ಶಾಲೆಯನ್ನು ದತ್ತು ಸ್ವೀಕಾರ ಮಾಡಿರುವ ವೇದ.ಮೂರ್ತಿ ಲೋಕೇಶ ಅಡಿಗ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ,ಶಿಕ್ಷಣದೊಂದಿಗೆ ಸತ್ಯಶೀಲತೆ,ನ್ಯಾಯ, ಧರ್ಮಾಚರಣೆ,ಸಂಸ್ಕೃತಿಗಳು ಕೂಡಿದಾಗ ಮಾತ್ರ ಉತ್ತಮ ಶಿಕ್ಷಣ ದೊರೆಯುತ್ತದೆ.ಶಿಕ್ಷಕರು ಅಂತಹ ಗುರುತರವಾದ ಜವಾಬ್ದಾರಿಯನ್ನು ವಹಿಸಿದಾಗ ಶಿಕ್ಷಣ ಪರಿಪೂರ್ಣವಾಗುವುದು ಎಂದು ಶುಭ ಹಾರೈಸಿದರು.
ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆಗಾಗಿ ನಡೆಸಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ಬೆಳಕು ಚೆಲುವ ಮಾಹಿತಿಯನ್ನು ಶಿಕ್ಷಕರಿಗೆ ನೀಡಲಾಯಿತು.
ಶಿಕ್ಷಕರಿಗಾಗಿ ನಡೆದ ಸನಾಲೋಚನಾ ಸಭೆಯಲ್ಲಿ ಸರಳ ಪ್ರಯೋಗ ನಡೆಸುವುದರ ಕುರಿತು ಬಿ.ಆರ್.ಪಿ.ರಾಮಕೃಷ್ಣ ದೇವಾಡಿಗರು ಶಿಕ್ಷಕರಿಂದ ಚರ್ಚಿಸಿದರು.ಜಯಪ್ರಕಾಶ್ ಶೆಟ್ಟಿ ಅವರು ಗಣಿತ ವಿಷಯದ ಕೆಲವು ಆಧಾರಿತ ಕಲಿಕಾಂಶವನ್ನು ಚಟುವಟಿಕೆ, ಮೋಜಿನ ಲೆಕ್ಕಗಳ ಮೂಲಕ ಆಕರ್ಷಕವಾಗಿ ನಿರ್ವಹಿಸಿದರು. ಸಂಪನ್ಮೂಲ ವ್ಯಕ್ತಿ ಸುಮಂಗಲ ಎಫ್.ಎಲ್.ಎನ್.ಕುರಿತು ಕ್ರೀಡಾವಿಧಾನದ ಮೂಲಕ ಉತ್ತಮವಾಗಿ ತರಗತಿ ನಡೆಸಿಕೊಟ್ಟರು.ವಿಶ್ವನಾಥ ಪೂಜಾರಿ,ಎಸ್.ಆನಂದ ಮೊಗವೀರ,ಎಸ್.ಡಿ.ಎಮ್. ಸಿ.ಅಧ್ಯಕ್ಷ ಶ್ರೀಧರ ದೇವಾಡಿಗ, ಮಂಜುನಾಥ ದೇವಾಡಿಗ,ರಾಜ ಖಾರ್ವಿ,ಶಾಲಾ ಮುಖ್ಯ ಶಿಕ್ಷಕಿ ರೋಹಿಣಿ,ಮಾಧವ ಅಡಿಗ, ರಶ್ಮಿ,ಸಂಪನ್ಮೂಲ ವ್ಯಕ್ತಿ ಜಯಪ್ರಕಾಶ ಶೆಟ್ಟಿ,ರಾಕೇಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.ಸಿ.ಆರ್.ಪಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಶಿಕ್ಷಕಿ ರೋಹಿಣಿ ವಂದಿಸಿದರು.
ಕುಂದಾಪುರ:ಸರಕಾರದ ಅಧ್ಯಯನದ ವರದಿ ಪ್ರಕಾರ ಶೇ.50 ರಷ್ಟು ಗರ್ಭಿಣಿ ಮಹಿಳೆಯರಲ್ಲಿ ಹಾಗೂ ಶೇ.60 ರಷ್ಟು ಮಕ್ಕಳಲ್ಲಿ ಮತ್ತು ಶೇ.60 ರಷ್ಟು…
ಕುಂದಾಪುರ:ಸಾಮಾಜಿಕ ಜಾಲಾತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ,ಬೈಂದೂರು ಕ್ಷೇತ್ರದ ಶಾಸಕರ ವಿರುದ್ಧ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಾನೂನು…
ಕುಂದಾಪುರ: ಮಾರಿಷಸ್ ದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಅಲ್ಲಿನ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ…
ಕುಂದಾಪುರ:ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸಹಿತ್ಲು ಸಮೀಪ ಸಮುದ್ರದಲ್ಲಿ ಈಜಲು ಹೋಗಿದ್ದ ನಾಲ್ವರು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿಗಳು ಸಮುದ್ರ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜು ಬ್ರಹ್ಮಾವರದಲ್ಲಿ ಕನ್ನಡ ಭಾμÁ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಸರಕಾರಿ ಪ್ರಥಮ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಕಾಲೇಜಿನಲ್ಲಿ ಹಿಂದಿ ಭಾಷಾ ವಿಭಾಗದ ವತಿಯಿಂದ ಹಿಂದಿ ದಿವಸ್ 'ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಪೂರ್ಣ ಪ್ರಜ್ಞಾ…