ಕುಂದಾಪುರ

ಶ್ರೀ ದುರ್ಗಾಂಬಾ ಬಾಡಿ ಬಿಲ್ಡರ್ಸ್ ನೂತನ ವಕ್ರ್ಸ್‍ಶಾಪ್ ಉದ್ಘಾಟನೆ

Share

ಕುಂದಾಪುರ:ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಿಪಾಡಿ- ಗುಹೇಶ್ವರ ರಸ್ತೆ ಮುಖ ಮಂಟಪ ಸಮೀಪ ನೂತನವಾಗಿ ನಿರ್ಮಿಸಿರುವ ಉಮಾನಾಥ ಮತ್ತು ದೇವರಾಜ್ ಗಾಣಿಗ ಅವರ ಮಾಲೀಕತ್ವದ ಶ್ರೀ ದುಗಾರ್ಂಬಾ ಬಾಡಿ ಬಿಲ್ಡರ್ಸ್ ಶುಭಾರಂಭ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಶ್ರೀ ದುಗಾರ್ಂಬಾ ಬಾಡಿ ಬಿಲ್ಡರ್ಸ್ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗಣಹೋಮ,ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು.
ಲಾರಿ,ಇನ್ಸುಲೇಟರ್,ಮಿಲ್ಕ್ ವಾಹನ,ಬೂಲೆರೋ,ಬಸ್ ಮತ್ತು ಮಿನಿ ಬಸ್ ಸೇರಿದಂತೆ ಇನ್ನಿತರ ವಾಹನಗಳ ಬಾಡಿ ವಿನ್ಯಾಸ ಹಾಗೂ ಪೇಂಟಿಂಗ್ ಮತ್ತು ಡೇಟಿಂಗ್,ಸ್ಟಿಕ್ಕರ್ ಕಟಿಂಗ್ ಶ್ರೀ ದುರ್ಗಾಂಬಾ ಬಾಡಿ ಬಿಲ್ಡರ್ಸ್ ವರ್ಕ್ ಶಾಪ್ ಶಾಪ್‍ನಲ್ಲಿ ಮಾಡಲಾಗುತ್ತದೆ.ಕ್ಲಪ್ತ ಸಮಯದಲ್ಲಿ ವಾಹನಗಳ ಕೆಲಸವನ್ನು ಮಾಡಿಕೊಡಲಾಗುತ್ತಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ದುರ್ಗಾಂಬಾ ವರ್ಕ್ ಶಾಪ್ ಭೇಟಿ ನೀಡಿ ತಮ್ಮ ವಾಹನಗಳನ್ನು ಅತ್ಯಾಕರ್ಷಕ ರೀತಿಯಲ್ಲಿ ವಿನ್ಯಾಸವನ್ನು ಮಾಡಿಕೊಳ್ಳಬಹುದಾಗಿದೆ.
ವಿಶ್ವನಾಥ್ ಅವರು ಮಾತನಾಡಿ,ಆಧುನಿಕ ಶೈಲಿಯ ಯಂತ್ರೋಪಕರಣಗಳನ್ನು ಹೊಂದಿರುವ ಶ್ರೀ ದುಗಾರ್ಂಬಾ ಬಾಡಿ ಬಿಲ್ಡರ್ಸ್ ವರ್ಕ್ ಶಾಪ್ ನಮ್ಮ ಪರಿಸರದಲ್ಲಿ ಆರಂಭಗೊಂಡಿರುವುದು ಬಹಳಷ್ಟು ಈ ಭಾಗದ ಜನರಿಗೆ ಬಹಳಷ್ಟು ಅನುಕೂಲವಾಗಲಿದೆ.ಬಾಡಿ ಬಿಲ್ಡರ್ಸ್ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳ ಕಾಲದ ಸುರ್ಧಿಘವಾದ ಅನುಭವ ಹೊಂದಿರುವ ಉಮಾನಾಥ ಮತ್ತು ದೇವರಾಜ್ ಅವರ ಅನುಭವ ಸಾಕಷ್ಟು ಪ್ರೌಡಿಮತ್ಯೆಯಿಂದ ಕೂಡಿದ್ದು ನುರಿತ ಕೆಲಸಗಾರರು ಕಾರ್ಯನಿರ್ವಹಿಸಲಿದ್ದಾರೆ.ಯುವಕರ ನವ ಉದ್ಯಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಹಿರಿಯ ಶಿಕ್ಷಕರಾದ ಭಾಸ್ಕರ ಗಾಣಿಗ ಮಾತನಾಡಿ,ತಾವು ಮಾಡುತ್ತಿರುವ ಕೆಲಸ ಕಾರ್ಯದ ಬಗ್ಗೆ ಬಹಳಷ್ಟು ಅನುಭವ ಪಡೆದು ನಂತರ ಸ್ವಂತ ಉದ್ಯಮವನ್ನು ಆರಂಭಿಸಿರುವುದರಿಂದ ವಾಹನಗಳ ಕೆಲಸ ಕಾರ್ಯವನ್ನು ಉತ್ತಮವಾದ ರೀತಿಯಲ್ಲಿ ಮಾಡಲಿದ್ದಾರೆ.ಯಾವುದೆ ಒಂದು ಕೆಲಸ ಮಾಡುವಾಗ ಆವೊಂದು ಕ್ಷೇತ್ರದಲ್ಲಿ ಜ್ಞಾನವನ್ನು ಹೊಂದಿರುವುದು ಬಹಳಷ್ಟು ಮಹತ್ವದವಾದ ಅಂಶವಾಗಿದೆ ಎಂದು ಅಭಿಪ್ರಾಯಪಟ್ಟರು.ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ದೊರಕುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಉಮಾನಾಥ ಮತ್ತು ದೇವರಾಜ್ ಅವರ ಕುಟುಂಬಸ್ಥರು,ಸ್ನೇಹಿತರು,ಹಿತೈಷಿಗಳು ಉಪಸ್ಥಿತರಿದ್ದರು.ಅರ್ಚಕರು ಧಾರ್ಮಿಕ ಕಾರ್ಯವನ್ನು ನೆರವೇರಿಸಿಕೊಟ್ಟರು.

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 days ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

3 days ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

3 weeks ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

4 weeks ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

1 month ago