ಕುಂದಾಪುರ

ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ,ಸಾಧಕ ಕಲಾವಿದರಿಗೆ ಸನ್ಮಾನ

Share

oplus_2

ಕುಂದಾಪುರ:ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಣ್ಕಿ ಕೂಡ್ಲಿಹಿತ್ಲು ಎಂಬಲ್ಲಿ ಯಕ್ಷಪ್ರೇಮಿ ರಶ್ಮಿತಾ ಸಂಜಯ್ ಮೊವಾಡಿ ಅವರ ಪ್ರಾಯೋಜಕತ್ವದಲ್ಲಿ ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಗುರುವಾರ ನಡೆಯಿತು.
ಸಿಗಂದೂರು ಮೇಳದವರಿಂದ ಮತದಾನ ಜಾಗೃತಿ ಕುರಿತು ವಿಶೇಷ ನಾಟ್ಯ ಪ್ರದರ್ಶನವನ್ನು ಮಾಡಲಾಯಿತು.ಬಡಗುತಿಟ್ಟಿನ ಖ್ಯಾತ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಲಾಯಿತು.
ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಆಯೋಜಕರಾದ ರಶ್ಮಿತಾ ಸಂಜಯ್ ಮೊವಾಡಿ ಅವರು ಸಾಧಕ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಎನ್ನುವುದು ಬಹಳ ದಿನಗಳ ಕಾಲದ ಕನಸಾಗಿದೆ.ಯುವ ಪೀಳಿಗೆಗೆ ಉತ್ತಮವಾದ ಸಂದೇಶವನ್ನು ನೀಡಬೇಕು ಎನ್ನುವ ದೃಷ್ಟಿಯಲ್ಲಿ ಇವೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರಿಗೂ ಧನ್ಯವಾದವನ್ನು ಅರ್ಪಿಸಿದರು.
ರಾಘವೇಂದ್ರ ಮೆಂಡನ್ ಕೋಣ್ಕಿ ಮಾತನಾಡಿ,ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮ ಗ್ರಾಮೀಣ ಪ್ರದೇಶದಲ್ಲಿ ಅದ್ದೂರಿಯಾಗಿ ನಡೆದಿದೆ.ಕಲಾವಿದರನ್ನು ಸನ್ಮಾನಿಸಿ,ಅಶಕ್ತ ಕುಟುಂಬಕ್ಕೆ ನೆರವನ್ನು ನೀಡುವುದರ ಮೂಲಕ ಮಾದರಿ ಕಾರ್ಯಕ್ರಮವನ್ನು ಆಯೋಜಿಸಿರುವ ರಶ್ಮಿತಾ ಸಂಜಯ್ ಮೊವಾಡಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿದರು.ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಆಗಬೇಕು ಎಂದು ಹೇಳಿದರು.
ಆರ್.ಜೆ ಇಂದ್ರ ಮಾತನಾಡಿ,ಯಕ್ಷೋತ್ಸ ಕಾರ್ಯಕ್ರಮ ಬಹಳಷ್ಟು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು ಊರಿನಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಉಂಟಾಗಿದೆ.ಇದೊಂದು ಮಾದರಿ ಯಕ್ಷಗಾನ ಕಾರ್ಯಕ್ರಮವಾಗಿದ್ದು ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು ಎಂದರು.
ಉದಯಕುಮಾರ್ ಹಟ್ಟಿಯಂಗಡಿ,ಪ್ರವೀಣ ಕುಮಾರ್ ಶೆಟ್ಟಿ ಕಡಿಕೆ,ರಾಘವೇಂದ್ರ ಮೆಂಡನ್,ಭಾಸ್ಕರ ಸಿ ಕುಂದರ್,ನಾಗರಾಜ,ಸಂದೀಪ್ ಬಸ್ರೂರು,ವಿಜಯ ಜಿ ಮೆಂಡನ್,ರಶ್ಮಿತಾ ಸಂಜಯ್ ಕೂಡ್ಗಿಹಿತ್ಲು ಉಪಸ್ಥಿತರಿದ್ದರು.
ಸಾಲಿಗ್ರಾಮ ಮೇಳದ ಶ್ರೇಷ್ಠ ಕಲಾವಿದರಾದ ಶಶಿಕಾಂತ್ ಶೆಟ್ಟಿ ಕಾರ್ಕಳ,ಮಾರಣಕಟ್ಟೆ ಮೇಳದ ನಂದೀಶ್ ಮೊಗವೀರ ಜನ್ನಾಡಿ ಮತ್ತು ಭಾಗವತರಾದ ಗಜೇಂದ್ರ ಆಜ್ರಿ,ಸಿಗಂದೂರು ಮೇಳದ ಆನಂದ ಅಂಕೋಲಾ ಮತ್ತು ನರಸಿಂಹ ಚಿಟ್ಟಾಣಿ,ಮೇಳದ ಸಿಬ್ಬಂದಿ ಗಜಾನನ ಮರಾಠಿ ಹಾಗೂ ಬೆಂಗಳೂರು ಉದ್ಯಮಿ ವರುಣ್ ಅವರನ್ನು ಕೂಡ್ಗಿಹಿತ್ಲು ಯಕ್ಷೋತ್ಸವ ಕಾರ್ಯಕ್ರಮದ ಅಂಗವಾಗಿ ರಂಗಸ್ಥಳದಲ್ಲಿ ಸನ್ಮಾನಿಸಲಾಯಿತು.
ವಿಶೇಷ ಚೇತನ ಶ್ರೀರಕ್ಷಾ ಅವರಿಗೆ ಧನಸಹಾಯವನ್ನು ವಿತರಿಸಲಾಯಿತು.

ಆರ್.ಜೆ ಇಂದ್ರ ಸ್ವಾಗತಿಸಿ,ವಂದಿಸಿದರು.ಸಿಗಂದೂರು ಮೇಳದವರಿಂದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.ಯಕ್ಷೋತ್ಸವ ಕಾರ್ಯಕ್ರಮದಲ್ಲಿ ರಶ್ಮಿತಾ ಸಂಜಯ್ ಮೊವಾಡಿ ದಂಪತಿಗಳನ್ನು ಸಿಗಂದೂರು ಮೇಳದ ವತಿಯಿಂದ ಗೌರವಿಸಲಾಯಿತು.
ವರದಿ:-ರಾಕೇಶ್
ನಮ್ಮ ಜಾಲತಾಣದಲ್ಲಿ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ-9916284048

Advertisement

Share
Team Kundapur Times

Recent Posts

ಎಸ್ಐ ನಾಸೀರ್ ಹುಸೇನ್ ಕುಸಿದು ಬಿದ್ದು ಮೃತ್ಯು

ಕುಂದಾಪುರ:ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಪೊಲೀಸ್ ರನ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ…

2 weeks ago

ನಿರ್ದೇಶಕರಾಗಿ ಸುರೇಂದ್ರ ಗುಡ್ಡೆಹೋಟೆಲ್ ಆಯ್ಕೆ

ಕುಂದಾಪುರ:ರಾಜ್ಯ ಸರಕಾರಿ ಶಿಕ್ಷಕರ ನೌಕರರ ಹಾಗೂ ಇಲಾಖೆಯಲ್ಲಿನ ಇತರರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಬೆಂಗಳೂರು ಅದರ ರಾಜ್ಯ…

2 weeks ago

ಧಾರ್ಮಿಕ ಮುಖಂಡ ಅಪ್ಪಣ್ಣ ಹೆಗ್ಡೆ ವಿಧಿವಶ

ಕುಂದಾಪುರ:ಮಾಜಿ ಎಂಎಲ್ಎ ಧಾರ್ಮಿಕ ಮುಖಂಡ ಅಜಾತಶತ್ರು ಅಪ್ಪಣ್ಣ ಹೆಗ್ಡೆ ಶನಿವಾರ ವಿಧಿವಶರಾಗಿದ್ದಾರೆ.ನೂರಕ್ಕೂ ಅಧಿಕ ನಾಗಮಂಡಲದ ನೇತೃತ್ವವನ್ನು ವಹಿಸಿಕೊಡಿದ್ದ ಅವರು, ಹಲವು…

1 month ago

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕಾಂಗ್ರೆಸ್ ಪಕ್ಷದ ಮುಖಂಡ ರಾಜು ದೇವಾಡಿಗ ತ್ರಾಸಿ ನಿಧನ

ಕುಂದಾಪುರ:ಕಾಂಗ್ರೆಸ್ ಪಕ್ಷದ ಮುಖಂಡರಾದ,ಪ್ರಬಲ ರಾಜಕಾರಣಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ ತ್ರಾಸಿ ಸೋಮವಾರ ನಿಧನರಾದರು.ಅವರು ಪತ್ನಿ ಮಕ್ಕಳು, ಬಂದು…

1 month ago

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆ:ಸಹೋದರರು ಸಾಧನೆ

ಕುಂದಾಪುರ:ಪುದುಚೇರಿಯಲ್ಲಿ ನಡೆದ 21 ನೇ ರಾಷ್ಟ್ರ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ ಹಟ್ಟಿಯಂಗಡಿ ಸಿದ್ಧಿ ವಿನಾಯಕ…

1 month ago

ಸಾಧಕ ವಿದ್ಯಾರ್ಥಿ ವೈಷ್ಣವಿಗೆ ಗೌರವದ ಸನ್ಮಾನ

ಕುಂದಾಪುರ:2025 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಹಾಗೂ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್…

2 months ago