ಕುಂದಾಪುರ:ತಾಲೂಕಿನ ಇತಿಹಾಸ ಪ್ರಸಿದ್ಧ ಹೆಮ್ಮಾಡಿ ಶ್ರೀ ಲಕ್ಷ್ಮೀನಾರಾಯಣ ದೇವರ ನೂತನ ಶಿಲಾಮಯಗುಡಿ ಲೋಕಾರ್ಪಣೆ ಹಾಗೂ ಶ್ರೀದೇವರ ಪುನರ್ ಪ್ರತಿಷ್ಠಾ ಮಹೋತ್ಸೊವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಶ್ರೀಲಕ್ಷ್ಮೀನಾರಾಯಣ ದೇವರ ಪುನರ್ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ಗುರುಗಣೇಶ ಪೂಜೆ,ಪುಣ್ಯಾಹವಾಚನ,ನವಗ್ರಹ ಧಾನ್ಯ ದಾನ,ಫಲದಾನ,ಜೀವಕುಭಾಭಿಷೇಕ,ಮಹಾಪ್ರಣ,ಪ್ರತಿಷ್ಠಾನ್ಯಾಸಾದಿಗಳು,ತತ್ತ್ವಕಲಶ ಸ್ಥಾಪನಾ,ಲಕ್ಷ್ಮೀನಾರಾಯಣ ಹೃದಯ ಹೋಮ,ಮಹಾಪೂಜಾ,ಪ್ರಸಾದ ವಿತರಣೆ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.ಶ್ರೀಲಕ್ಷ್ಮೀನಾರಾಯಣ ದೇವರಿಗೆ ಅಲಂಕಾರ ಪೂಜೆ ಮತ್ತು ಮಹಾಮಂಗಳಾರತಿ ಹಾಗೂ ಶಿಖರ ಪ್ರತಿಷ್ಠೆಯನ್ನು ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಲ ಶೆಟ್ಟಿ ನಗು ಗ್ರೂಪ್ ಕುಂದಾಪುರ ಮತ್ತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಷ್ಠ ಶಿಲ್ಪದಿಂದ ಕಂಗೊಳಿಸುತ್ತಿರುವ ಶ್ರೀಲಕ್ಷ್ಮೀನಾರಾಯಣ ದೇವಾಲಯ:ಹೆಮ್ಮಾಡಿ ಶ್ರೀಲಕ್ಮೀ ನಾರಾಯಣ ದೇವಸ್ಥಾನವು ಇತಿಹಾಸಕಾರರ ಅಧ್ಯಯನದಂತೆ 11ನೇ ಶತಮಾನದಲ್ಲಿ ಹೇಮಂತ ಅರಸನಿಂದ ಸ್ಥಾಪಿಸಲಾಗಿದೆ ಎನ್ನುವ ಐತಿಹ್ಯವಿದೆ.ನೂತನ ಶಿಲಾಮಯಗುಡಿ ನೋಡುಗರ ಮನ ಸೆಳೆತಯುತ್ತಿದ್ದು,ಕಾಷ್ಠ ಶಿಲ್ಪದೊಂದಿಗೆ ಕಂಗೊಳಿಸುತ್ತಿದೆ.
ಕುಂದಾಪುರ:ಅಧಿಕಾರ ಸ್ವೀಕಾರದ ವೇಳೆ ಪಂಚಾಯಿತಿ ಕಟ್ಟಡದ ಒಳಗಡೆ ಅನಧಿಕೃತವಾಗಿ ನಮಾಜ್ ಮಾಡಿರುವುದು ಅತ್ಯಂತ ಕಳವಳಕಾರಿ ಸಂಗತಿ ಆಗಿದ್ದು.ಅಧಿಕಾರಕ್ಕಾಗಿ ಸಮಾಜದ ಸ್ವಾಸ್ತ್ಯವನ್ನು…
ಕುಂದಾಪುರ:ಧಾರ್ಮಿಕ ಮುಖಂಡ ಸಮಾಜ ಸೇವಕರಾದ ದುಬೈ ಉದ್ಯಮಿ ಸೇನಾಪುರ ಹಾಡಿಮನೆ ಮಂಜುನಾಥ ವಿನಯ ಪೂಜಾರಿ ದಂಪತಿಗಳ ವತಿಯಿಂದ ಸೇನಾಪುರ ವಿಷ್ಣುಮೂರ್ತಿ…
ಬ್ರಹ್ಮಾವರ:ವಿದ್ಯಾಲಕ್ಷ್ಮೀ ಸಾಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ಹೊಸ ವರ್ಷ ಆಚರಣೆ ಅದ್ದೂರಿಯಾಗಿ ನಡೆಯಿತು.ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ ಅವರು ದೀಪ ಬೆಳಗಿಸುವುದರ…
ಕುಂದಾಪುರ:ರತ್ನಮ್ಮ ಗ್ರೂಪ್ಸ್ ಪುನೀತ್ ಶೆಟ್ಟಿ ಮಾಲೀಕತ್ವದ ಆದಿಶಕ್ತಿ ಎಂಟರ್ಪ್ರೈಸ್ ಹಾರ್ಡವೇರ್ ಬೈಂದೂರು ತಾಲೂಕಿನ ಯರುಕೋಣೆ ಮುಖ್ಯ ರಸ್ತೆಯಲ್ಲಿನ ಮೂಕಾಂಬಿಕಾ ಕಾಂಪ್ಲೆಕ್ಸ್…
ಕುಂದಾಪುರ:ಧಿಮಂತ ರಾಜಕಾರಣಿ ಹಾಗೂ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಮನೆ ಮಾತಾಗಿರುವ ದಿ ಆರ್.ಕೆ ಸಂಜೀವ ರಾವ್ ಖಂಬದಕೋಣೆ ಅವರ…
ಮಂಗಳೂರು:ಅರ್ಕುಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಟಿಪ್ಪರ್ ಅಡಿಗೆ ಸಿಲುಕಿ ಸಸಿಹಿತ್ಲು ಮೇಳದ ಕಲಾವಿದ ಪ್ರವಿತ್ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ…